ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಬಿಎಂಎಸ್ ಕಾಲೇಜಿನಲ್ಲಿ ಗಣರಾಜ್ಯೋತ್ಸವ ಆಚರಣೆ

Rashmi Kasaragodu
Updated On : 27 Jan 2014, 1:36 am

ಹುಳಿಯಾರು: ಇಲ್ಲಿನ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಚಾರ್ಯ ಆರ್. ಮೂಗೇಶಪ್ಪ ಧ್ವಜಾರೋಹಣ ನೆರವೇರಿಸುವ ಮೂಲಕ ಗಣರಾಜ್ಯೋತ್ಸವ ಕಾರ್ಯಕ್ರವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಅವರು ಮಾತನಾಡಿ, ದೇಶದ್ಯಾಂತ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಅದನ್ನು ತಡೆಗಟ್ಟುವ ಕಾರ್ಯವಾಗಬೇಕಿದೆ ಅದಕ್ಕೆ ಇಂದಿನ ಯುವಪೀಳಿಗೆ ಮುಂದೆ ಬರುವ ಮೂಲಕ ನಮ್ಮ ದೇಶವನ್ನು ಭ್ರಷ್ಟಾಚಾರ ಮುಕ್ತ ರಾಷ್ಟ್ರವನ್ನಾಗಿ ರೂಪಿಸಬೇಕು ಎಂದರು. ರಾಷ್ಟ್ರೀಯ ಹಬ್ಬಗಳ ಆಚರಣೆಯಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ನಮ್ಮ ನಾಡು ನುಡಿಯ ಬಗ್ಗೆ ಗೌರವ ತೋರಿಸುವ  ಮೂಲಕ ನಮ್ಮಿಂದಾಗುವ ದೇಶಸೇವೆಯನ್ನು ಮಾಡಬೇಕು ಎಂದು ಕಿವಿಮಾತು ಹೇಳಿದರು. ಇತಿಹಾಸ ಉಪನ್ಯಾಸಕ ಸೈಯ್ಯದ್ ಇಬ್ರಾಹಿಂ ಮಾತನಾಡಿ, ಸಂವಿಧಾನ ರಚನೆಯಾದ ಬಗೆ ಹಾಗೂ ಅದಕ್ಕಾಗಿ ಶ್ರಮಿಸಿದ ಮಹನೀಯರ ಬಗ್ಗೆ ವಿವರವಾಗಿ ತಿಳಿಸಿದರಲ್ಲದೆ ಅದನ್ನು ಪ್ರಸ್ತುತ ಯಾವ ರೀತಿ ಪಾಲಿಸಬೇಕು ಎಂಬುದನ್ನು ತಿಳಿಸಿದರು. ಕಾಲೇಜಿನ ಸಿಡಿಸಿಯ ನಂದಿಹಳ್ಳಿ ಶಿವಣ್ಣ, ಜಲಾಲ್ ಸಾಬ್, ಉಪನ್ಯಾಸಕರಾದ ಶಿವಯ್ಯ, ಶಂಕರಲಿಂಗಯ್ಯ ಹಾಗೂ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement