ರಸ್ತೆ ನಿಯಮ ಪಾಲಿಸಲು ಕರೆ
ತಿಪಟೂರು: ರಸ್ತೆ ನಿಯಮಗಳನ್ನು ಪಾಲಿಸಿದಲ್ಲಿ ಅಪಘಾತಗಳನ್ನು ತಡೆಗಟ್ಟಬಹುದಾಗಿದ್ದು, ತಾಳ್ಮೆಯಿಂದ ವಾಹನಗಳನ್ನು ಚಲಾಯಿಸಬೇಕೆಂದು ಸಾರಿಗೆ ನಿರೀಕ್ಷಕರಾದ ಎಸ್.ಟಿ.ಸತೀಶ್ ತಿಳಿಸಿದರು. ಪಟ್ಟಣದ ಶ್ರೀ ಬಸವೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಸಾರಿಗೆ ಇಲಾಖೆ ಮತ್ತು ಹಂಸ ಡ್ರೈವಿಂಗ್ ಶಾಲೆಯ ವತಿಯಿಂದ ಹಮ್ಮಿಕೊಂಡಿದ್ದ 25ನೇ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವಾಹನ ಪರವಾನಿಗೆ ಇಲ್ಲದೆ ವಾಹನಗಳನ್ನು ಚಲಾಯಿಸಬೇಡಿ. ಪ್ರತಿಯೊಬ್ಬರು ವಾಹನ ಪರವಾನಿಗೆಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕೆಂದು ತಿಳಿಸಿದರು. ನಿವೃತ್ತ ಪ್ರಾಧ್ಯಾಪಕ ಸೋಮಶೇಖರ್, ಹಂಸ ಡ್ರೈವಿಂಗ್ ಸ್ಕೂಲ್ನ ಪ್ರಾಂಶುಪಾಲ ಡಿ.ಎಸ್.ನಾಗರಾಜು, ಉಪನ್ಯಾಸಕರಾದ ಜಯರಾಮ್, ಶಂಕರಲಿಂಗಪ್ಪ ಮತ್ತಿತರರಿದ್ದರು.