ಸಂವಿಧಾನ ಜಾರಿಗೆ ಬಂದ ದಿನ: ತಹಸೀಲ್ದಾರ್ ಚಂದ್ರಶೇಖರಯ್ಯ
ಶಿರಾ: ದೇಶದ ಪ್ರಜೆಗಳು ಮುಕ್ತವಾಗಿ ಜೀವಿಸುವ ವಾತಾವರಣ ಸೃಷ್ಟಿಸಿದ ಸಂವಿಧಾನ ಜಾರಿಗೆ ಬಂದ ದಿನವಿದು. ಇಂತಹ ಅವಕಾಶ ಜನತೆಗೆ ಕಲ್ಪಿಸಿದ ಸಂವಿಧಾನಕ್ಕೆ ಗೌರವ ನೀಡುವುದು ಅಗತ್ಯ ಎಂದು ತಹಸೀಲ್ದಾರ್ ಎಚ್.ಜಿ. ಚಂದ್ರಶೇಖರಯ್ಯ ತಿಳಿಸಿದರು.
ಅವರು ನಗರದ ಶ್ರೀವಿವೇಕಾನಂದ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ವತಿಯಿಂದ ಏರ್ಪಡಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿ ಮಾತನಾಡಿದರು. ಈ ದೇಶದ ಎಲ್ಲಾ ಪ್ರಜೆಗಳು ದೇಶದ ಅಭಿವೃದ್ಧಿ ಮೊದಲು ಎಂದ ಅವರು ದೇಶದ ಏಳ್ಗೆಗಾಗಿ ಶ್ರಮಿಸಿದ ಎಲ್ಲಾ ಮಹನೀಯರ ತ್ಯಾಗ ಬಲಿದಾನವನ್ನು ಸ್ಮರಿಸಬೇಕು ಎಂದರು.
ಜಿ.ಪಂ. ಸದಸ್ಯ ಸಿ.ಆರ್.ಉಮೇಶ್ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿದರು. ತಾ.ಪಂ. ಉಪಾಧ್ಯಕ್ಷ ಉದಯಶಂಕರ್, ಜಿ.ಪಂ. ಸದಸ್ಯ ಅರೇಹಳ್ಳಿ ರಮೇಶ್ ಮತ್ತಿತರರು ಮಾತನಾಡಿದರು. ತಾ.ಪಂ. ಅಧ್ಯಕ್ಷೆ ಗಂಗಮ್ಮ ಸಿದ್ದಹನುಮಯ್ಯ ಅಧ್ಯಕ್ಷತೆ ವಹಿಸಿದ್ದರು.
ಸಾಧಕರಿಗೆ ಸನ್ಮಾನ: ರಾಷ್ಟ್ರ ರಾಜ್ಯಮಟ್ಟದಲ್ಲಿ ವಿವಿಧ ಕ್ರೀಡೆಗಳಲ್ಲಿ ಸ್ಪರ್ಧಿಸಿ ರಾಜ್ಯಕ್ಕೆ, ತಾಲೂಕಿಗೆ ಕೀರ್ತಿ ತಂದ ಕ್ರೀಡಾ ಸಾಧಕರಾದ ಪ್ರತಿಕ್ಷಾ. ಪಿ ಕೌಸ್ಕರ್, ಹರ್ಷಿತ.ವೈ.ಎಸ್, ಹನುಮಂತರಾಜು, ದಾಸೇಗೌಡ, ಹಾಗೂ ಪೊಲೀಸ್ ಇಲಾಖೆಯಲ್ಲಿ ಸುದಿರ್ಘ ಸೇವೆ ಸಲ್ಲಿಸಿದ ಎ.ಎಸ್.ಐ. ಹನುಮಂತರಾಯಪ್ಪ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದರು.
ನೃತ್ಯರೂಪಕ: ಸೆಂಟ್ ಆನ್ ಪ್ರೌಢಶಾಲೆಯ ಮಕ್ಕಳು ನೀಡಿದ ನೃತ್ಯರೂಪಕ ಹಾಜರಿದ್ದವರ ಕಣ್ಮನ ಸೆಳೆಯಿತು.ಪ್ರಶಂಸೆಗೆ ಪಾತ್ರವಾಯಿತು. ವಿವಿಧ ಶಾಲೆಗಳ ನೂರಾರು ವಿದ್ಯಾರ್ಥಿಗಳಿಂದ ಸಾಮೂಹಿಕ ಆಕರ್ಷ ಕವಾಯತು ನಡೆಯಿತು.
ಡಿ.ವೈ.ಎಸ್.ಪಿ. ಜಿ.ರಾಮಾನಾಯ್ಕ, ತಾ.ಪಂ. ಕಾಯಂ ನಿರ್ವಹಣಾಧಿಕಾರಿ ಸನಾವುಲ್ಲ, ಪೌರಾಯುಕ್ತ ಈರಾನಾಯ್ಕ, ಬಿ.ಇ.ಓ. ರಾಜ್ಕುಮಾರ್, ನಗರಸಭೆ ಸದಸ್ಯರಾದ ಬಸವರಾಜು, ರಾಜಣ್ಣ, ಅಂಜಿನಪ್ಪ, ಹಬೀಬ್, ರೇಣುಕಮ್ಮ, ಮಂಜುನಾಥ್, ಮತ್ತಿತರರು ಹಾಜರಿದ್ದರು.