ಕೊರಟಗೆರೆಯಲ್ಲಿ ಪ್ರತಿಭಟನೆ
ಕನ್ನಡಪ್ರಭ ವಾರ್ತೆ ಕೊರಟಗೆರೆ ಜ.27
ಪರಭಾಷೆ ಡಬ್ಬಿಂಗ್ ಮಾಡುವುದನ್ನು ವಿರೋಧಿಸಿ ಸೋಮವಾರ ಕರವೇ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಕರವೇ ತಾಲೂಕು ಅಧ್ಯಕ್ಷ, ಬಿಜೆಪಿ ತಾಲೂಕು ಅಧ್ಯಕ್ಷ ಹಾಗೂ ಪ.ಪಂ ಸದಸ್ಯ ಪವನ್ ಕುಮಾರ್ ನೇತೃತ್ವದಲ್ಲಿ ನೂರಾರು ಸದಸ್ಯರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಿಂದ ಪ್ರಧಾನ ರಸ್ತೆ ಮುಖಾಂತರ ತಹಸೀಲ್ದಾರ್ ಕಚೇರಿಗೆ ತೆರಳಿ ಕನ್ನಡ ಚಿತ್ರರಂಗದವರು ಲಕ್ಷಾಂತರ ಕುಟುಂಬದವರು ಡಬ್ಬಿಂಗ್ ಮಾಡುವುದರಿಂದ ಬೀದಿಪಾಲಾಗುವ ಪರಿಸ್ಥಿತಿ ಒದಗಿ ಬರುತ್ತದೆ ಎಂದು ಮನವಿಯನ್ನು ತಹಸೀಲ್ದಾರ್ಗೆ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಬಿ.ಕೆ. ದತ್ತಾತ್ರಯ (ಕ.ರ.ವೇ ನಗರಾಧ್ಯಕ್ಷರು), ರವಿಕುಮಾರ್ ಗೋಪಿ, ಅರುಣ್ ಕುಮಾರ್, ಗುರು, ಕಲೀಂ, ರಘು, ಸ್ವಾಮಿ ಮುಂತಾದವರು ಭಾಗವಹಿಸಿದ್ದರು.