ಗಡಿ ಗ್ರಾಮಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲು ಚಿಂತನೆ: ತಿಮ್ಮರಾಯಪ್ಪ
ಪಾವಗಡ: ಪ್ರಯಾಣಿಕರಿಗೆ ತೊಂದರೆ ಆಗದಂತೆ ತಾಲೂಕಿನ ಗಡಿ ಗ್ರಾಮಗಳಿಗೆ ಸರ್ಕಾರಿ ಸಾರಿಗೆ ವ್ಯವಸ್ಥೆ ಕಲ್ಪಿಸಲು ಚಿಂತನೆ ಕೈಗೊಂಡಿರುವುದಾಗಿ ಶಾಸಕ ಕೆ.ಎಂ. ತಿಮ್ಮರಾಯಪ್ಪ ತಿಳಿಸಿದರು.
ಅವರು ಬಹುದಿನಗಳ ಬೇಡಿಕೆಯಾಗಿದ್ದ ಪಾವಗಡ ಹಾಗೂ ಚಿತ್ರದುರ್ಗ ಮಾರ್ಗದಲ್ಲಿ ಕ್ಕೆ 2 ಸರ್ಕಾರಿ ಬಸ್ಗಳಿಗೆ ಚಾಲನೆ ನೀಡಿ ಮಾತನಾಡಿದರು.
ಪಾವಗಡ ಹಾಗೂ ಚಿತ್ರದುರ್ಗ ಮಾರ್ಗ ಜಿಲ್ಲಾ ಹೆದ್ದಾರಿಯಾಗಿದ್ದು ಈ ಮಾರ್ಗವಾಗಿ ನಿತ್ಯ ಓಡಾಡುವ ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದರೂ ಈ ಮಾರ್ಗವಾಗಿ ಇದುವರೆಗೂ ಸರ್ಕಾರಿ ಬಸ್ ನಿಯೋಜಿಸದೆ ಇರುವುದು ವಿಪರ್ಯಾಸ. ಅಲ್ಲದೇ ಈ ಮಾರ್ಗವಾಗಿ ಖಾಸಗಿ ಬಸ್ಗಳಲ್ಲಿ ನಿತ್ಯ ಓಡಾಡುವ ಸಾವಿರಾರು ಪ್ರಯಾಣಿಕರು ನಾನಾ ರೀತಿಯ ಹಿಂಸೆ ಅನುಭವಿಸುತ್ತಿರುವುದು ಸಾಮಾನ್ಯವಾಗಿದೆ.
ಅದರಲ್ಲೂ ಸೋಮವಾರ ಶನಿವಾರವಂತು ಖಾಸಗಿ ಬಸ್ಗಳು ಪ್ರಯಾಣಿಕರನ್ನು ಮಿತಿ ಮೀರಿ ಒಳ ಮತ್ತು ಬಸ್ ಟಾಪ್ ಮೇಲೆ ಪ್ರಯಾಣಿಕರನ್ನು ತುಂಬಿಸಿಕೊಂಡು ಬರುವುದಂತು ಭಯಾನಕ ಎಂದರು. ಅಪಘಾತ ತಡೆ ಮತ್ತು ಪ್ರಯಾಣಕರ ಪ್ರಯಾಣ ಸುರಕ್ಷೆ ಹಿನ್ನೆಲೆಯಲ್ಲಿ ಚಿತ್ರದುರ್ಗ ಮತ್ತು ಪಾವಗಡ ಮಾರ್ಗಕ್ಕೆ ಸರ್ಕಾರಿ ಸಾರಿಗೆ ವ್ಯವಸ್ಥೆ ಕಲ್ಪಿಸಿದ್ದು ಈ ಮಾರ್ಗವಾಗಿ ಓಡಾಡುವ ಈ 2 ಬಸ್ಗಳು ನಿತ್ಯ 4 ಭಾರಿ ಓಡಾಡುವುದರಿಂದ ಪ್ರಯಾಣಿಕರಿಗೆ ತುಂಬ ಅನುಕೂಲವಾಗಲಿದೆ ಎಂದರು.