ಬೆಂಕಿ ಅವಘಡ ; 24 ಕ್ಕೂ ಹೆಚ್ಚು ಗುಡಿಸಲು ಸುಟ್ಟು ಭಸ್ಮ
ಶಿರಾ: ನಗರದ ಹೊರವಲಯದ ರಾ.ಹೆ. 4 ರ ಬೈಪಾಸ್ ರಸ್ತೆಯ ಪಕ್ಕದ ಶಿವಾಜಿ ನಗರ ಬಡಾವಣೆಯಲ್ಲಿ ಸೋಮವಾರ ಮಧ್ಯಾಹ್ನ ಆಕಸ್ಮಿಕ ಬೆಂಕಿ ಅವಘಡ ಉಂಟಾಗಿ 24 ಕ್ಕೂ ಹೆಚ್ಚು ಗುಡಿಸಲುಗಳು ಸುಟ್ಟು ಭಸ್ಮವಾಗಿ ಅದರಲ್ಲಿದ್ದ ದವಸ ಧಾನ್ಯಗಳು ಬೆಂಕಿಗಾಹುತಿಯಾಗಿ ಕುಟುಂಬಗಳು ಬೀದಿ ಪಾಲಾಗಿರುವ ಘಟನೆ ನಡೆದಿದೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಅವಿರತ ಶ್ರಮದಿಂದ ಬೆಂಕಿ ನಂದಿಸಿದ್ದು, ಹೆಚ್ಚಿನ ಅನಾಹುತವನ್ನು ತಪ್ಪಿಸಿದೆ. ತಹಸೀಲ್ದಾರ್ ಚಂದ್ರಶೇಖರಯ್ಯ, ನಗರಸಭೆ ಆಯುಕ್ತ ಈರಾನಾಯ್ಕ, ಕಂದಾಯ ನಿರೀಕ್ಷಕ ನಾಗರಾಜು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಗುಡಿಸಲು ಕಳೆದುಕೊಂಡವರ ಪಟ್ಟಿ ಮಾಡಿ ತಕ್ಷಣದ ಪರಿಹಾರವಾಗಿ 1000 ರು. ನೀಡಿ, ಗಂಜಿಕೇಂದ್ರವನ್ನು ತೆರೆದಿದ್ದು, ಸರ್ಕಾರದಿಂದ ಬರುವ ಪರಿಹಾರವನ್ನು ಶೀಘ್ರ ನೀಡುವುದಾಗಿ ತಿಳಿಸಿದರು. ಗುಡಿಸಲು ಕಳೆದುಕೊಂಡವರ ರೋಧನ ಮುಗಿಲು ಮುಟ್ಟಿತ್ತು.
ಭೇಟಿ: ಸ್ಥಳಕ್ಕೆ ಮಾಜಿ ಸಚಿವ ಬಿ.ಸತ್ಯನಾರಾಯಣ, ಬಿಜೆಪಿ ಹಿಂದುಳಿದ ವರ್ಗದ ಜಿಲ್ಲಾಧ್ಯಕ್ಷ ಬಿ.ಕೆ.ಮಂಜುನಾಥ್, ಭೇಟಿ ನೀಡಿ ಸಂತ್ರಸ್ತರಿಗೆ ಸಮಾಧಾನಪಡಿಸಿದರು.