ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ರೇಷ್ಮೆ ಹುಳು ಸಾಕಣೆ ಮನೆಗೆ ಆಕಸ್ಮಿಕ ಬೆಂಕಿ: ಅಪಾರ ನಷ್ಟ, ರೈತ ಗಂಭೀರ ಗಾಯ

Rashmi Kasaragodu
Updated On : 28 Jan 2014, 1:06 am

ಕುಣಿಗಲ್: ರೇಷ್ಮೆ ಹುಳು ಸಾಕಣೆ ಮನೆಗೆ ಆಕಸ್ಮಿಕ ಬೆಂಕಿ ತಗಲಿ 4 ಲಕ್ಷ ರು. ಮೌಲ್ಯದ  ನಷ್ಟ ಉಂಟಾಗಿ, ರೈತನೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ, ಹುಲಿಯೂರುದುರ್ಗ ಹೋಬಳಿಯ ಹಿತ್ತಲಪುರ ಗ್ರಾಮದಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದೆ.
ಹಿತ್ತಲಪುರ ಗ್ರಾಮದ ನಿಂಗಯ್ಯ ಎಂಬಾತ, ರೇಷ್ಮೆ ಹುಳು ಸಾಕಣೆ ಮನೆ ನಿರ್ಮಿಸಿಕೊಂಡು, ರೇಷ್ಮೆ ಬೆಳೆಯಲ್ಲಿ ಜೀವನ ನಿರ್ವಹಣೆ ಮಾಡುತ್ತಿದ್ದರು, ಎಂದಿನಂತೆ ಸೋಮವಾರ ರೇಷ್ಮೆ ಹುಳುಗಳ ಆರೈಕೆಗೆ ಗೂಡಿನ ಮನೆಯಲ್ಲಿದ್ದಾಗ , ಮನೆಗೆ ಆಕಸ್ಮಿಕ ಬೆಂಕಿ ತಗುಲಿ ಸುಮಾರು 200 ಕೆಜೆ ರೇಷ್ಮೆ ಗೂಡು, ಚಂದ್ರಿಕೆ ಸೇರಿದಂತೆ ಇತರೆ ಪರಿಕರಗಳೆಲ್ಲಾ ಸುಟ್ಟು ಕರಕಲಾಗಿವೆ. ಅಗ್ನಿಶ್ಯಾಮಕ ದಳದ ಎರಡು ವಾಹನಗಳ ಸತತ ಕಾರ್ಯಾಚರಣೆಯಿಂದ ಬೆಂಕಿ ಹತೋಟಿಗೆ ಬಂದಿದೆ. ಘಟನೆಯಲ್ಲಿ ರೈತ ನಿಂಗಯ್ಯ ಗಂಭೀರವಾಗಿ ಗಾಯಗೊಂಡಿದ್ದು 4 ಲಕ್ಷ ರು.ನಷ್ಟವಾಗಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement