ಅಪಘಾತ; ಸವಾರ ಸಾವು
ಕುಣಿಗಲ್: ಬೈಕ್ ಡಿಕ್ಕಿ ಹೊಡೆದ ಪರಿಣಾಮ ಯುವಕನೊಬ್ಬ ಮೃತಪಟ್ಟು ಮತ್ತೊಬ್ಬ ಗಾಯಗೊಂಡಿರುವ ಘಟನೆ ಹುಲಿಯೂರುದುರ್ಗ ಪೊಲೀಸ್ ಠಾಣೆಯ ದೀಪಾಂಬುದಿ ಕಾಳಿಕಾಂಬ ದೇವಾಲಯ ಸಮೀಪದ ಮುಖ್ಯರಸ್ತೆಯಲ್ಲಿ ಸೋಮವಾರ ಸಂಜೆ ನಡೆದಿದೆ.
ಮೃತನನ್ನು ಕೆ.ಹೊನ್ನಮಾಚನ ಹಳ್ಳಿಯ ಮಾರುತಿ(20) ಎಂದು ಗುರುತಿಸಲಾಗಿದೆ.
ಈತ ಕೃಷ್ಣಮೂರ್ತಿ ಎಂಬಾತನೊಂದಿಗೆ ದೇವಾಲಯದಿಂದ ಬರುವಾಗ ಅಪರಿಚಿತ ಪಲ್ಸರ್ ಬೈಕ್ ಒಂದು ವೇಗವಾಗಿ ಗುದ್ದಿ ಹೋಗಿದೆ.
ಕೃಷ್ಣಮೂರ್ತಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ರಾಮಯ್ಯ ಎಂಬಾತ ಮಂಗಳವಾರ ದೂರು ನೀಡಿದ ಮೇರೆಗೆ ಹುಲಿಯೂರುದುರ್ಗ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.