ಬಸ್ ಡಿಕ್ಕಿ; ಮಹಿಳೆ ಸಾವು
ಕುಣಿಗಲ್: ರಸ್ತೆ ಬದಿ ಹೋಗುತ್ತಿದ್ದ ಪಾದಾಚಾರಿಗೆ ಸಾರಿಗೆ ಸಂಸ್ಥೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸ್ಥಳದಲ್ಲೆ ಮೃತಪಟ್ಟಿರುವ ಘಟನೆ ಸೋಮವಾರ ಬೆಳಗಿನ ಜಾವ ಹುಲಿಯೂರುದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯ ಸಣಬಘಟ್ಟ ಗೇಟ್ ಬಳಿ ನಡೆದಿದೆ. ಸಣಬಘಟ್ಟ ಗ್ರಾಮದ ಪಾಪಮ್ಮ(58) ಮೃತ ಮಹಿಳೆ. ಮಾಗಡಿ ಡಿಪೋಗೆ ಸೇರಿದ ಸಾರಿಗೆ ಸಂಸ್ಥೆ ಬಸ್ ಕೊಪ್ಪಕಡೆಗೆ ಬರುವಾಗ ಘಟನೆ ಸಂಭವಿಸಿದೆ. ಅಪಘಾತದ ನಂತರ ಚಾಲಕ ಪರಾರಿಯಾಗಿದ್ದಾನೆ. ಪೊಲೀಸರು ಬಸ್ಸನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.