ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸಂವಿಧಾನ ಆಶಯ ಜಾರಿಗೆ ತರುವಲ್ಲಿ ಸೋಲು

Mainashree
Updated On : 28 Jan 2014, 9:29 am

ತುಮಕೂರು: ನಮ್ಮ ಭಾರತದ ಸಂವಿಧಾನ ಅತ್ಯಂತ ಶ್ರೇಷ್ಠವಾಗಿದ್ದು ಇದರ ಆಶಯಗಳನ್ನು ಜಾರಿಗೆ ತರುವಲ್ಲಿ ನಾವು ಸೋತಿದ್ದೇವೆ ಎಂದು ಲೇಖಕಿ ಮಲ್ಲಿಕಾಬಸವರಾಜು ವ್ಯಾಖ್ಯಾನಿಸಿದರು. ವರದಕ್ಷಿಣೆ ವಿರೋಧಿ ವೇದಿಕೆ, ಸಾಂತ್ವನ ಕೇಂದ್ರ, ತುಮಕೂರು ವತಿಯಿಂದ ನಗರದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನದ ಆಶಯಗಳು ಪರಿಸ್ಥಿತಿಗೆ ಆಶಾದಾಯಕವಾಗಿವೆಯೇ ಕುರಿತ ಚಿಂತನಾ ಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು. ಜಾತ್ಯಾತೀತತೆ, ಲಿಂಗ-ತಾರತಮ್ಯ ನಿವಾರಣೆ ಕುರಿತ ಹಲವು ಉದಾತ್ತ ಅಂಶಗಳು ಸಂವಿಧಾನದಲ್ಲಿ ಅಡಕವಾಗಿದ್ದರೂ ಬಹುತೇಕ ಅಂಶಗಳನ್ನು ಇನ್ನೂ ಸಹ ಜಾರಿಗೆ ತರಲು ಸಾಧ್ಯವಾಗಿಲ್ಲ. ಕಾನೂನು ಜಾರಿಯಲ್ಲಿ ನಾವು ವಿಫಲರಾಗಿದ್ದು ಮನಃಪರಿವರ್ತನೆಯೊಂದೆ ಉಳಿದಿರುವ ಮಾರ್ಗ ಎಂದರು. ಲೇಖಕಿ ಬಾ.ಹ ರಮಾಕುಮಾರಿ, ವರದಕ್ಷಿಣೆ ವಿರೋಧಿ ವೇದಿಕೆ ಅಧ್ಯಕ್ಷೆ ಅನ್ನಪೂರ್ಣ ವೆಂಕಟನಂಜಪ್ಪ, ವೇದಿಕೆಯ ಉಪಾಧ್ಯಕ್ಷೆ ಎಂ.ಸಿ ಲಲಿತ, ಸಿ.ಎಲ್. ಸುನಂದಮ್ಮ ಮಾತನಾಡಿದರು. ವೇದಿಕೆ ಪದಾಧಿಕಾರಿಗಳಾದ ಟಿ.ಆರ್. ಅನುಸೂಯ, ಡಾ. ಎಚ್.ಎಸ್. ಲಲಿತ, ಲಲಿತ ಮಲ್ಲಪ್ಪ, ಮಮತ ರವಿಕುಮಾರ್, ಪಾರ್ವತಮ್ಮ ರಾಜ್‌ಕುಮಾರ್, ರಾಜೇಶ್ವರಿ ಚಂದ್ರಶೇಖರ್, ಅಕ್ಕಮ್ಮ, ಸ್ವಾತಂತ್ರ್ಯ  ಹೋರಾಟಗಾರ ಟಿ.ಆರ್. ರೇವಣ್ಣ, ಇತರರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement