ಶೃಂಗಾರ ಪ್ರಕಾಶನಕ್ಕೆ ಅಂಕಿತ ಪುಸ್ತಕ ಪುರಸ್ಕಾರ
ಚಿಕ್ಕನಾಯಕನಹಳ್ಳಿ: ವರ್ಷದ ಅತ್ಯುತ್ತಮ ಪ್ರಕಾಶನ ಸಂಸ್ಥೆಗೆ ನೀಡುವ ಅಂಕಿತ ಪುಸ್ತಕ ಪುರಸ್ಕಾರಕ್ಕೆ ಪಟ್ಟಣದ ಶೃಂಗಾರ ಪ್ರಕಾಶನ ಸಂಸ್ಥೆಗೆ ಲಭಿಸಿದೆ ಎಂದು ಪ್ರಕಾಶನ ಸಂಸ್ಥೆಯ ಎಂ.ವಿ. ನಾಗರಾಜರಾವ್ ತಿಳಿಸಿದರು. ಅಂಕಿತ ಪುಸ್ತಕ ಪ್ರಕಾಶನ ಸಂಸ್ಥೆಯು ಕನ್ನಡದ ಶ್ರೇಷ್ಠ ಪ್ರಕಾಶರೊಬ್ಬರಿಗೆ ಪ್ರಶಸ್ತಿ ನೀಡುವ ಸಲುವಾಗಿ ಕನ್ನಡಿಗರ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ವರ್ಷದ ಅತ್ಯುತ್ತಮ ಪ್ರಕಾಶನ ಸಂಸ್ಥೆಗೆ-ಅಂಕಿತ ಪುಸ್ತಕ ಪುರಸ್ಕಾರ ಹೆಸರಿನಲ್ಲಿ ದತ್ತಿ ಸ್ಥಾಪಿಸಿದೆ. ಇಂತಹ ಪ್ರಶಸ್ತಿಗೆ 2014ನೇ ಸಾಲಿನ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ.
ಅರ್ಜಿ ಆಹ್ವಾನ
ತಿಪಟೂರು: ಕ್ವಾಲಿಟಿ ಸಂಸ್ಥೆ ವತಿಯಿಂದ ಉಚಿತ ಟೈಲರಿಂಗ್, ಬ್ಯುಟಿಷಿಯನ್, ಮೆಹಂದಿ, ಹ್ಯಾಂಡ್ ಎಂಬ್ರಾಯಿಡರಿಂಗೆ ತರಬೇತಿಯನ್ನು ಆಯೋಜಿಸಿದ್ದು, 15 ವರ್ಷ ಮೇಲ್ಪಟ್ಟ ಎಲ್ಲ ಮಹಿಳೆಯರು ಅರ್ಜಿ ಸಲ್ಲಿಸಬಹುದಾಗಿದೆ. ಕೋರ್ಸ್ ಮುಗಿದ ನಂತರ ಉಚಿತ ಹೊಲಿಗೆ ಯಂತ್ರ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಕ್ವಾಲಿಟಿ ಸಂಸ್ಥೆ, ಮೊದಲನೇ ಮಹಡಿ, ಮಾಖಾನ್ ಲೈನ್, ಎಸ್ಬಿಎಂ ಬ್ಯಾಂಕ್ ಎದುರು, ರೇಲ್ವೆ ಸ್ಟೇಷನ್ ರಸ್ತೆ, ತಿಪಟೂರು. ಮೊ. 8710076697.