ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಒಂದು ಕೋಮಿನೆಡೆ ಶಾಸಕರ ಒಲವು; ಆರೋಪ

Rashmi Kasaragodu
Updated On : 31 Jan 2014, 1:21 am

ಹುಳಿಯಾರು: ಪಟ್ಟಣದಲ್ಲಿ ಎರಡು ಕೋಮುಗಳ ನಡುವೆ ಅಹಿತಕರ ಘಟನೆ ನಡೆದು ಕೆಲ ದಿನಗಳೇ ಕಳೆದಿದ್ದರೂ ಈ ಬಗ್ಗೆ ಆರಕ್ಷಕ ಇಲಾಖೆಯವರು ಸೂಕ್ತ ಕ್ರಮ ಕೈಗೊಳ್ಳದಿರುವುದು ಹಾಗೂ ಈ ಭಾಗದ ಹಾಲಿ ಶಾಸಕರು  ಮೌನ ವಹಿಸಿರುವುದು ನೋಡಿದರೆ ಶಾಸಕರು ಒಂದು ಕೋಮಿನಡೆಗೆ ನಡೆಯುತ್ತಿದ್ದಾರೆ ಎಂಬಂತೆ ಭಾಸವಾಗುತ್ತಿದೆ ಎಂದು ಹಿಂದೂ ಹಿತರಕ್ಷಣಾ ವೇದಿಕೆಯ ಬಡಗಿ ರಾಮಣ್ಣ ಆರೋಪಿಸಿದರು.
ಅವರು ಪಟ್ಟಣದ ಗ್ರಾಮದೇವತೆ ಶ್ರೀದುರ್ಗಾಪರಮೇಶ್ವರಿ ದೇವಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಈಗಲಾದರೂ ಶಾಸಕರು ಪಟ್ಟಣದತ್ತ ಧಾವಿಸಿ ಬಂದು ತಮಗಾಗುತ್ತಿರುವ ಅನ್ಯಾಯವನ್ನು ಹಾಗೂ ಹಿಂದೂ ಸಮಾಜದ ಬೇಡಿಕೆಗಳನ್ನು ಈಡೇರಿಸುವಂತೆ ಹಿಂದೂ ಹಿತರಕ್ಷಣಾ ವೇದಿಕೆಯ ಪರವಾಗಿ ಕೇಳಿಕೊಂಡರು.
ಕಳೆದ ಕೆಲ ದಿನಗಳ ಹಿಂದೆ ಹಿಂದೂ ಹಿತರಕ್ಷಣಾ ವೇದಿಕೆಯವರು ತಮಗಾಗುತ್ತಿರುವ ತೊಂದರೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಪಟ್ಟಣದಾದ್ಯಂತ ಪ್ರತಿಭಟನಾ ಮೆರವಣಿಗೆಗೆ ನಡೆಸಿ ಮನವಿ ಪತ್ರ ಸಲ್ಲಿಸಿದಾಗ ಪೊಲೀಸ್ ಇಲಾಖೆಯವರು ಇನ್ನು ಐದಾರು ದಿನಗಳಲ್ಲಿ ಗಲಭೆಗೆ ಕಾರಣರದವರನ್ನು ಹಾಗೂ ಪ್ರಚೋದನೆ ನೀಡಿದ ಮುಖಂಡರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.
ಈ ಕ್ಷೇತ್ರದ ಹಾಲಿ ಶಾಸಕರಾದ ಸಿ.ಬಿ.ಸುರೇಶ್ಬಾಬು ಘಟನೆ ನಡೆದು ಇಷ್ಟು ದಿನಗಳದರೂ ಒಮ್ಮೆಯಾದರೂ ಪಟ್ಟಣಕ್ಕೆ ಬಂದು ಘಟನೆ ಬಗ್ಗೆ ಮಾತನಾಡಿಲ್ಲ. ಎಲ್ಲೋ ಕುಳಿತು ತಾವು ಸಮಸ್ಯೆ ಬಗೆಹರಿಸುವುದಾಗಿ ಹೇಳುತ್ತಿದ್ದಾರೆ.
ಹಿಂದೂ ಹಿತರಕ್ಷಣಾ ವೇದಿಕೆಯಲ್ಲಿ ಯಾವುದೇ ರಾಜಕೀಯ ಬೇಧವಿಲ್ಲದೆ ನಾವೆಲ್ಲಾ ಒಂದೇ ಎಂಬ ಮನೋಭಾವನೆಯಿಂದ ಸಾಗುತ್ತಿದ್ದೇವೆ. ಈಗ ನಡೆದಿರುವ ಅಹಿತಕರ ಘಟನೆಯಿಂದ ಹಿಂದೂ ಸಮಾಜಕ್ಕೆ ಆಗುತ್ತಿರುವ ತೊಂದರೆಯ ಬಗ್ಗೆ ಶಾಸಕರು ಮೌನ ವಹಿಸಿರುವುದು ಅವರ ತಾರತಮ್ಯ ನೀತಿ ತೋರಿಸುತ್ತದೆ ಎಂದು ಆರೋಪಿಸಿದರು.
ದುರ್ಗಮ್ಮ ದೇವಾಲಯ ಸಮಿತಿಯ ಹು.ಕ.ವಿಶ್ವನಾಥ್, ಗ್ರಾಪಂ ಸದಸ್ಯರಾದ ರಾಘವೇಂದ್ರ, ಹೇಮಂತ್, ಶಿವಣ್ಣ, ಹಿಂದೂ ಹಿತರಕ್ಷಣಾ ವೇದಿಕೆಯ ಗಂಗಾಧರ್, ಎಸ್.ಆರ್.ಎಸ್.ದಯಾನಂದ್, ಧನಂಜಯಮೂರ್ತಿ, ವೆಂಕಟೇಶ್, ಭೈರೇಶ್, ಪ್ರಕಾಶ್ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement