ಕೈ ಅಭಿನಂದನಾ ಸಭೆ ಇಂದು
ಮಧುಗಿರಿ: ತಾಲೂಕು ಕಾಂಗ್ರೆಸ್ ಸಮಿತಿ ವತಿಯಿಂದ ತುಮಕೂರು ಲೋಕಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರು ಮತ್ತು ಮಧುಗಿರಿ ವಿಧಾನ ಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರು, ಪದಾಧಿಕಾರಿಗಳಿಗೆ ಅಭಿನಂದನಾ ಸಮಾರಂಭವನ್ನು ಜ.31ರ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಪಟ್ಟಣದ ಎಂಎನ್ಕೆ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ತಾ.ಕಾಂಗ್ರೆಸ್ ಸಮಿತಿ ತಿಳಿಸಿದೆ. ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಲ್ಲಿಕಾರ್ಜುನಯ್ಯ ಅಧ್ಯಕ್ಷತೆ ವಹಿಸುವರು. ನಗರ ಅಧ್ಯಕ್ಷ ಎಸ್.ಆರ್. ರಾಜ್ಗೋಪಾಲ್ ಕಾರ್ಯಕ್ರಮ ಉದ್ಘಾಟಿಸುವರು. ತುಮಕೂರು ಲೋಕಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಆರ್. ರಾಜೇಂದ್ರ, ಮಧುಗಿರಿ ಕ್ಷೇತ್ರದ ಅಧ್ಯಕ್ಷ ಕೆ.ವಿ. ನಾಗೇಂದ್ರ, ಉಪಾಧ್ಯಕ್ಷ ಎಸ್.ನಾಗಭೂಷಣ್, ಕಾರ್ಯದರ್ಶಿಗಳಾದ ಮೋಹನ್ ಕುಮಾರ್, ರಘುಪತಿ, ಮೊಹಮ್ಮದ್ ಜಾಕೀರ್ ಹುಸೇನ್, ಮಾರುತಿ, ಆನಂದ್ ಕುಮಾರ್ ಅವರಿಗೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಕಾಂಗ್ರೆಸ್ ಎಲ್ಲ ಹಂತದ ಚುನಾಯಿತ ಪ್ರತಿನಿಧಿಗಳು ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಜ್ಞಾನಬೋಧಿನಿ ಶಾಲೆಗೆ 11 ರ್ಯಾಂಕ್
ಪಾವಗಡ: ಚಿತ್ರದುರ್ಗ ಸಿರಿಗನ್ನಡ ಪ್ರಕಾಶನ ವತಿಯಿಂದ ಭಾನುವಾರ 2013- 14ನೇ ಸಾಲಿಗೆ ಚಿತ್ರದುರ್ಗದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಪರೀಕ್ಷೆಯಲ್ಲಿ ಪಟ್ಟಣದ ಜ್ಞಾನಬೋಧಿನಿ ಶಾಲೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ 3, ಜಿಲ್ಲಾ ಮಟ್ಟದಲ್ಲಿ 5, ಹಾಗೂ ತಾ. ಮಟ್ಟದಲ್ಲಿ 3 ಸೇರಿದಂತೆ ಒಟ್ಟು 11 ರ್ಯಾಂಕ್ಗಳನ್ನು ಪಡೆದಿದ್ದಾರೆ. ರ್ಯಾಂಕ್ ಪಡೆಯುವ ಮೂಲಕ ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳನ್ನು ಶಾಲೆಯ ಮುಖ್ಯೋಪಾದ್ಯಾಯ ಮೈಲಾರರೆಡ್ಡಿ, ಪ್ರಾಂಶುಪಾಲ ಜಾಕೀರ್ ಸೇರಿದಂತೆ ಸಂಘಟನಾ ಶಿಕ್ಷಕರಾದ ಸುಮ, ಎಸ್.ಬಾಲಸುಬ್ರಮಣ್ಯಂ, ಶಾಲೆಯ ಆಡಳಿತ ಮಂಡಳಿ ಮತ್ತು ಪೋಷಕರು ಅಭಿನಂದಿಸಿದ್ದಾರೆ.