ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಗಣರಾಜ್ಯೋತ್ಸವ ಆಚರಣೆ

Rashmi Kasaragodu
Updated On : 31 Jan 2014, 1:21 am

ತಿಪಟೂರು: ತಾಲೂಕಿನ ಕಲ್ಲಹಳ್ಳಿ-ಬಿಸಲೇಹಳ್ಳಿಯ ಬೆಟ್ಟದ ಶ್ರೀ ರಾಮೇಶ್ವರ ಪ್ರೌಢಶಾಲೆಯಲ್ಲಿ 65ನೇ ಗಣರಾಜ್ಯೋತ್ಸವ ಆಚರಿಸಲಾಯಿತು.
ಶಾಲಾ ಕಾರ್ಯದರ್ಶಿ ಬಿ.ಎ.ನೀಲಕಂಠಸ್ವಾಮಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ದೇಶದ ಐಕ್ಯತೆ ಮತ್ತು ಒಗ್ಗಟ್ಟಿಗೆ ಎಲ್ಲರೂ ದುಡಿಯಬೇಕು. ವಿದ್ಯಾರ್ಥಿಗಳು ದೇಶದ ಮುಂದಿನ ಆಸ್ತಿಯಾಗಿದ್ದು, ಪ್ರಾಮಾಣಿಕ ದೇಶಭಕ್ತರಾಗಿ ದೇಶಕ್ಕಾಗಿ ದುಡಿಯಬೇಕೆಂದರು.
ಮುಖ್ಯಶಿಕ್ಷಕ ಎಚ್.ಬಿ. ಕೃಷ್ಣಪ್ಪ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳು ಅಸಾಧ್ಯವಾದುದ್ದನ್ನು ಸಾಧಿಸಿ ದೇಶದ ಅಭಿವೃದ್ಧಿಗೆ ಮುಂದಾಗಬೇಕು. ಸ್ಪರ್ಧಾತ್ಮಾಕ ಜಗತ್ತಿನಲ್ಲಿ ಯಶಶ್ವಿಯಾಗಬೇಕಾದರೆ ಕಠಿಣ ಶ್ರಮ ಅಗತ್ಯವಿದ್ದು, ಹೆತ್ತವರಿಗೆ, ಶಿಕ್ಷಕರಿಗೆ ಉತ್ತಮ ಹೆಸರು ತರಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿ ಹಾಗೂ ಗ್ರಾಪಂ ಅಧ್ಯಕ್ಷರಾಗಿ ಆಯ್ಕೆಯಾದ ಕೆ. ಪ್ರಸನ್ನಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಪ್ರೌಢಶಾಲಾ ಮುಖ್ಯ ಶಿಕ್ಷಕ ಎಸ್.ಡಿ.ಪರಮಶಿವಯ್ಯ, ನಾಗರಾಜು ಇದ್ದರು. ವಿದ್ಯಾರ್ಥಿಗಳಾದ ಹೇಮ ಮತ್ತು ಸಂಗಡಿಗರು ಪ್ರಾರ್ಥಿಸಿ, ಎಚ್.ಟಿ.ಮಂಜಪ್ಪ ಸ್ವಾಗತಿಸಿ, ಆರ್.ಗಂಗಯ್ಯ ನಿರೂಪಿಸಿ, ಕೆ.ಆರ್.ಮಲ್ಲಿಕಾರ್ಜುನಪ್ಪ ವಂದಿಸಿದರು.



ಮತದಾನದ ಮಹತ್ವ ಅರಿಯಲು ಕರೆ


ಗುಬ್ಬಿ: ಭಾರತ ಜಗತ್ತಿನಲ್ಲಿ ಅತ್ಯಂತ ಪ್ರಬಲ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಇದನ್ನು ಮತ್ತಷ್ಟು ಬಲಿಷ್ಠಗೊಳಿಸಲು ಯುವ ಜನಾಂಗ ಜಾಗೃತರಾಗಬೇಕು. ಮತದಾನದ ಮಹತ್ವ ಮತ್ತು ಪಾವಿತ್ರ್ಯತೆಯನ್ನು ಪ್ರತಿಯೊಬ್ಬರೂ ತಿಳಿಯಬೇಕಿದೆ ಎಂದು ಪ್ರಾಚಾರ್ಯ ಕೆ.ಎಸ್.ಸಿದ್ದಲಿಂಗಪ್ಪ ಹೇಳಿದರು.
ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಗಣರಾಜ್ಯೋತ್ಸವದಲ್ಲಿ ಭಾಗವಹಿಸಿ ಮಾತನಾಡಿ, ಶ್ರಮ, ಸಾಧನೆ ಮಹತ್ತರವಾದದು. ಪ್ರತಿ ಭಾರತೀಯ ಪ್ರಜೆಯು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣಾ ಹಕ್ಕು, ನಿಯಮ ಮತ್ತು ನೀತ ಸಂಹಿತೆಯನ್ನು ಕಟ್ಟು ನಿಟ್ಟಾಗಿ ಪಾಲಿಸುವ ಮೂಲಕ ಚುನಾವಣಾ ವ್ಯವಸ್ಥೆಯನ್ನು ಮತ್ತಷ್ಟು ಬಲಿಷ್ಠಗೊಳಿಸುವತ್ತ ಚಿಂತನೆ ನಡೆಸಬೇಕು ಎಂದರು.
ಉಪನ್ಯಾಸಕರಾದ ಖಾಚಿ ದಸ್ತಗೀರ್ಸಾಬ್, ಡಿ.ಜೆ.ಪ್ರೇಮಲೀಲಾ, ಮಾರುತಿ ಎಂ.ಗೌಡರ್, ಎನ್ಎಸ್ಎಸ್ ಯೋಜನಾಧಿಕಾರಿ ಎಂ.ಎಚ್.ನಾಗರಾಜು, ಗ್ರಂಥಪಾಲಕ ಟಿ.ಜಿ.ಕುಮಾರ್, ಪುಟ್ಟಮ್ಮ ಇದ್ದರು.
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement