ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ರಸ್ತೆ ಸುರಕ್ಷತಾ ಸಪ್ತಾಹ

Rashmi Kasaragodu
Updated On : 31 Jan 2014, 1:21 am

ತಿಪಟೂರು: ಸಾರಿಗೆ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ 25ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ಜಾಗೃತಿ ಜಾಥಾವನ್ನು ಉಪವಿಭಾಗಾಧಿಕಾರಿ ಬಿ.ಸಿಂಧು ಹಸಿರು ನಿಶಾನೆ ತೋರಿಸುವುದರ ಮೂಲಕ ಉದ್ಘಾಟಿಸಿದರು.
ಪಟ್ಟಣದ ಶ್ರೀ ಕೆಂಪಮ್ಮ ದೇವಿ ದೇವಸ್ಥಾನದಿಂದ ಆರ್ಟಿಒ ಕಚೇರಿವರೆಗೆ ಜಾಥಾ ನಡೆಸಿ, ರಸ್ತೆ ಸುರಕ್ಷತೆ ಬಗ್ಗೆ ಮಾಹಿತಿ ನೀಡಲಾಯಿತು.
ಜಾಥಾದಲ್ಲಿ ಎಆರ್ಟಿಒ ಅಬ್ದುಲ್ ವಜೀದ್, ಆರ್ಟಿಒ ಇನ್ಸ್ಪೆಕ್ಟರ್ಗಳಾದ ಸತೀಶ್, ಮಂಜುನಾಥ್ಪ್ರಸಾದ್, ನಂದೀಶ್, ಅಧೀಕ್ಷಕರಾದ ಭೋಗೇಶ್, ಶ್ರೀಸಿದ್ದಲಿಂಗೇಶ್ವರ ಡ್ರೈವಿಂಗ್ ಸ್ಕೂಲ್ನ ಆರ್.ಟಿ.ಮಲ್ಲಿಕಾರ್ಜುನಯ್ಯ ಸೇರಿದಂತೆ ಎಲ್ಲ ಡ್ರೈವಿಂಗ್ ಸ್ಕೂಲ್ನ ಸಿಬ್ಬಂದಿ ಮತ್ತು ಪ್ರೌಢಶಾಲಾ, ಪಿಯು, ಕಾಲೇಜಿನ ವಿದ್ಯಾರ್ಥಿಗಳು ಇದ್ದರು.




ಶಾಲೆಗೆ ಶಿಕ್ಷಕರ ಕೊರತೆ: ಬೀಗ ಜಡಿದು ಪ್ರತಿಭಟನೆ
ಪಾವಗಡ: ಶಾಲೆಗೆ ಶಿಕ್ಷಕರ ಕೊರತೆ ಹಿನ್ನೆಲೆಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯೊಂದಕ್ಕೆ ಗ್ರಾಮಸ್ಥರು ಬೀಗ ಜಡಿದು ಪ್ರತಿಭಟನೆ ನಡೆಸಿದ ಘಟನೆ ಗುರುವಾರ ತಾ.ಕ್ಯಾದಿಗುಂಟೆ ಗ್ರಾಮದಲ್ಲಿ ನಡೆದಿದೆ. ಕ್ಯಾದಿಗುಂಟೆ ಗ್ರಾಮದ ಸರ್ಕಾರಿ ಎಚ್ಇಪಿಎಸ್ ಶಾಲೆಯಲ್ಲಿ 1ರಿಂದ 7ನೇ ತರಗತಿಯವರೆಗೆ ಸುಮಾರು 250 ಮಂದಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಈ ಶಾಲೆಗೆ 5 ಮಂದಿ ಶಿಕ್ಷಕರ ಪೈಕಿ ಕೇವಲ ಒಬ್ಬ ಶಿಕ್ಷಕ ಮಾತ್ರ ನಿಯೋಜಿತರಾಗಿದ್ದಾರೆ. ಅಲ್ಲದೇ ಈ ಶಿಕ್ಷಕ ಕೂಡ ವಾರದಲ್ಲಿ 3 ದಿನ ಮಾತ್ರ ಶಾಲೆಗೆ ಹಾಜರು ಆಗುತ್ತಿರುವ ಹಿನ್ನೆಲೆಯಲ್ಲಿ ಶಿಕ್ಷಕರ ಕೊರತೆ ವಿರೋಧಿಸಿ ಶಾಲೆಗೆ ಬೀಗ ಜಡಿದು  ಪ್ರತಿಭಟನೆ ನಡೆಸಿದರು. ಹೆಚ್ಚುವರಿ ಶಿಕ್ಷಕರನ್ನು ನೇಮಿಸಿ ಎಂದು ತಾ.ಕ್ಷೇತ್ರಾ ಶಿಕ್ಷಣಾಧಿಕಾರಿ ಬಿ.ಪಿ. ನಾಗರಾಜ್ ಅವರಿಗೆ ಮನವಿ ಮಾಡಿದರೆ ಶಿಕ್ಷಕರನ್ನು ನಿಯೋಜಿಸುವ ಅಧಿಕಾರ ನಮಗಿಲ್ಲ, ಈ ಬಗ್ಗೆ ಮಧುಗಿರಿ ಡಿಡಿಪಿಐಗೆ ದೂರು ನೀಡಿ ಎಂದು ಜಾರಿಕೊಳ್ಳುತ್ತಾರೆ.ಅಲ್ಲದೇ ಬಿಇಒ ಸೇರಿದಂತೆ ಡಿಡಿಪಿಐ ಹಾಗೂ ಸಂಬಂಧಪಟ್ಟವರಿಗೆಲ್ಲ ಮನವಿ ಮಾಡಿದರೂ ಕಳೆದ 6 ತಿಂಗಳಿಂದ ಶಿಕ್ಷಕರನ್ನು ನಿಯೋಜಿಸುವಲ್ಲಿ ಬಿಇಒ  ಮತ್ತು ಡಿಡಿಪಿಐ ನಿರ್ಲಕ್ಷ್ಯ ವಹಿಸಿದ್ದಾರೆಂದು ಪ್ರತಿಭಟನೆಯ ನೇತೃತ್ವ ವಹಿಸಿದ ಮುಖಂಡ ಕೃಷ್ಣನಾಯ್ಕ್ ಆರೋಪಿಸಿದ್ದಾರೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಒಬ್ಬರ ಮೇಲೆ ಒಬ್ಬರು ಹೇಳಿಕೊಂಡು ಹೆಚ್ಚುವರಿ ಶಿಕ್ಷಕರನ್ನು ನಿಯೋಜಿಸುವಲ್ಲಿ ಆಸಕ್ತಿ ವಹಿಸದ ಕಾರಣ ಕ್ಯಾದಿಗುಂಟೆ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.   

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement