ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ರಾಜ್ಯ ಜೆಡಿಎಸ್ ಯುವ ಘಟಕಕ್ಕೆ ಗುರುಪ್ರಸನ್ನ ಆಯ್ಕೆ

Rashmi Kasaragodu
Updated On : 31 Jan 2014, 1:19 am

ತಿಪಟೂರು: ತಾಲೂಕಿನ ಜೆಡಿಎಸ್ ಯುವ ಮುಖಂಡರಾಗಿ ಜೆಡಿಎಸ್ ಸಂಘಟನೆಗೆ ಹೆಚ್ಚು ಒತ್ತು ಕೊಟ್ಟು ದುಡಿದದ್ದನ್ನು ಪರಿಗಣಿಸಿದ ರಾಜ್ಯ ಯುವ ಜನತಾದಳ ರಾಜ್ಯಾಧ್ಯಕ್ಷ ಎಸ್. ಮಧುಬಂಗಾರಪ್ಪನವರು ಕಲ್ಪತರು ನಾಡು ತಿಪಟೂರಿನ ಎಲ್.ಎಸ್. ಗುರುಪ್ರಸನ್ನ ಅವರನ್ನು ರಾಜ್ಯ ಯುವ ಜನತಾದಳದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ತಮ್ಮನ್ನು ಆಯ್ಕೆ ಮಾಡಲು ಸಹಕಾರ ನೀಡಿದ ವರಿಷ್ಠರಾದ ದೇವೇಗೌಡರು ಹಾಗೂ ಕುಮಾರಸ್ವಾಮಿ, ರಾಜ್ಯಾಧ್ಯಕ್ಷರಾದ ಎ.ಕೃಷ್ಣಪ್ಪ, ಜಿಲ್ಲಾಧ್ಯಕ್ಷ ಡಾ.ಹುಲಿನಾಯ್ಕರ್ ಹಾಗೂ ನೇಮಕಾತಿ ಮಾಡಿದ ಮಧುಬಂಗಾರಪ್ಪನವರಿಗೆ ವಂದನೆಗಳನ್ನು ತಿಳಿಸಿ, ಅವರು ನೀಡಿರುವ ಈ ಗುರುತರ ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸುತ್ತೇನೆ ಎಂದು ತಿಳಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement