ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸಂವಿಧಾನಬದ್ಧ ಕಾರ್ಮಿಕ ಸಂಘ ಒಪ್ಪಿ

Rashmi Kasaragodu
Updated On : 31 Jan 2014, 1:19 am

ಕ.ಪ್ರ. ವಾರ್ತೆ    ತುಮಕೂರು     ಜ. 30
ಸಂವಿಧಾನಬದ್ದ ಕಾರ್ಮಿಕ ಸಂಘವನ್ನು ಆಡಳಿತ ಮಂಡಳಿ ಒಪ್ಪಿ ಕಾರ್ಮಿಕರ ಕುಂದುಕೊರತೆಗಳ ಕುರಿತು ಹಾಗೂ ಸೇವಾ ನಿಯಮಗಳ ಕುರಿತು ಚರ್ಚಿಸುವಂತೆ ಸಿಐಟಿಯು ರಾಜ್ಯ ಕಾರ್ಯದರ್ಶಿ ಪ್ರತಾಪ್ ಸಿಂಹ ಆಗ್ರಹಿಸಿದರು.
ಅವರು ತುಮಕೂರು ಬಳಿಯ ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ವಿನಾಯಕ ಸಿ.ಎನ್.ಸಿ. ಕಾರ್ಖಾನೆ ಎದುರು ಪ್ರತಿಭಟನಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಭಾರತದ ಸಂವಿಧಾನದಲ್ಲಿ ವಿಧಿ ವಿಧಾನಗಳ ಅಡಿಯಲ್ಲಿ ಕಾರ್ಮಿಕರು ತಮ್ಮ ಹಕ್ಕು ಬಾಧ್ಯತೆಗಳ ರಕ್ಷಣೆಗೆ ರಚಿಸಿಕೊಂಡಿರುವ ಕಾರ್ಮಿಕ ಸಂಘ ಮಾನ್ಯತೆ ಮಾಡದ ಮಾಲೀಕರ ಕ್ರಮವನ್ನು ಉಗ್ರವಾಗಿ ಟೀಕಿಸಿದರು.
ಕಾರ್ಮಿಕರು ಶಾಂತಿಯುತವಾಗಿ ಕೆಲಸ ನಿರ್ವಹಿಸಿಕೊಂಡು ಹೋಗುತ್ತಾರೆ. ಕಾರ್ಮಿಕರ ಬೇಡಿಕೆಗಳ ಸಂಬಂಧ ಆಡಳಿತ ಮಂಡಳಿ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕೆಂದರು.
ಖಂಡನಾರ್ಹ: ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಅವರು ಮಾತನಾಡಿ ಆಡಳಿತದಲ್ಲಿ ಕಾರ್ಮಿಕರ ಭಾಗವಹಿಸುವಿಕೆ ಪರಿಕಲ್ಪನೆಯಡಿಯಲ್ಲಿ ಕೆಲವೆಡೆ ಸೌಹಾರ್ದತೆ ಮುಂದುವರೆಯುತ್ತಿದ್ದರೆ. ಇಲ್ಲಿ ಕಾರ್ಮಿಕ ಸಂಘ ಒಪ್ಪದ ಪಾಳೆಗಾರಿಕೆ ಪ್ರವೃತ್ತಿ ಖಂಡನಾರ್ಹ ಎಂದರು.
ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎನ್.ಕೆ. ಸುಬ್ರಹ್ಮಣ್ಯ ಮಾತನಾಡಿ ಈ ಕೈಗಾರಿಕಾ ಪ್ರದೇಶಗಳಲ್ಲಿ ಸಾಕಷ್ಟು ಕಾರ್ಖಾನೆಗಳಲ್ಲಿ ಕಾರ್ಮಿಕ ಕಾನೂನುಗಳು ಉಲ್ಲಂಘನೆಯಾಗುತ್ತಿದ್ದರೂ ಕಾರ್ಮಿಕ ಇಲಾಖೆ ಮಾತ್ರ ಕ್ರಮ ವಹಿಸದೆ ಕಾರ್ಮಿಕರಿಗೆ ಅನ್ಯಾಯವೆಸಗುತ್ತಿದೆ ಎಂದರು.
ಮುಂದಾಗಿ: ಈ ಬಗ್ಗೆ ಕಾರ್ಮಿಕರು ಸಂಘಟನೆಯನ್ನು ರಚಿಸಿಕೊಂಡು ತಮ್ಮ ನ್ಯಾಯಯುತವಾದ ಬೇಡಿಕೆಗಳನ್ನು ಪಡೆದುಕೊಳ್ಳಲು ಮುಂದಾಗಬೇಕೆಂದರು.
ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಜಿಲ್ಲಾಧ್ಯಕ್ಷ ಬಿ. ಉಮೇಶ್ ಅವರು ಕರ್ನಲಿಬರ್ಸ್ ಸಂಘಟನೆಯ ಕಾರ್ಯದರ್ಶಿ ದಿಲೀಪ್ಕುಮಾರ್, ಇಂಡೋಸಿಸ್ ಆಂಟಿಷಾಕ್, ಎಐಟಿಯುಸಿ ಕಾರ್ಮಿಕ ಸಂಘಟನೆಯ ಮುಖಂಡರಾದ ದಯಾನಂದ್, ಎಂ.ಎಚ್.ಐ ಕಾರ್ಮಿಕ ಮುಖಂಡ ಯೋಗನರಸಿಂಹ, ಕಾಳೇಶ್ವರಿ ರಿಪೈನರಿ ಕಾರ್ಮಿಕ ಸಂಘಟನೆಯ ಮುಖಂಡ ಮುತ್ತುರಾಜ್, ವಿನಾಯಕ ಸಿ.ಎನ್.ಸಿ.ಕಾರ್ಮಿಕ ಸಂಘಟನೆ ಅಧ್ಯಕ್ಷ ರುದ್ರೇಶ್, ಖಜಾಂಚಿ ಗಿರೀಶ್, ಓಬೇದುಲ್ಲಾ, ಸಂಘಟನಾ ಕಾರ್ಯದರ್ಶಿ ಗಿರೀಶ್, ಡಿಸಾ ಇಂಡಿಯಾ ವರ್ಕರ್ಸ್ಯೂನಿಯನ್ ಕಾರ್ಯದರ್ಶಿ ವಿರೂಪಾಕ್ಷ, ಪೌರಕಾರ್ಮಿಕ ಸಂಘಟನೆಯ ಮುಖಂಡ ನರಸಿಂಹಮೂರ್ತಿ ಮುಂತಾದವರು ಮಾತನಾಡಿದರು.
ಪ್ರತಿಭಟನಾ ಸಮಾವೇಶದ ಅಧ್ಯಕ್ಷತೆಯನ್ನು ತುಮಕೂರು ತಾಲೂಕು ಸಿಐಟಿಯು ಅಧ್ಯಕ್ಷ ಷಣ್ಮುಖಪ್ಪ ವಹಿಸಿದ್ದರು. ವಿಜಯ್  ಸ್ವಾಗತಿಸಿ, ರಾಘವೇಂದ್ರ ನಿರೂಪಿಸಿ ನರಸಿಂಹಮೂರ್ತಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement