ಹೆಚ್ಎಂಟಿ ಜನರಲ್ ಮ್ಯಾನೇಜರ್ ಗಜಾನನ್ ದಂಪತಿಗೆ ಸನ್ಮಾನ
ಚೇಳೂರು: ಹೆಚ್ಚಿಗೆ ಜನಸಂಖ್ಯೆಯಿದ್ದರೆ ಸಲ್ಲದು. ಅವರಿಂದ ಸಮಾಜ ಮುಖಿ ಕೆಲಸವಾಗುವುದು ಮುಖ್ಯವಾಗಿದೆ. ಕಡಿಮೆ ಜನಸಂಖ್ಯೆಯಿದ್ದು ಎಲ್ಲರೂ ಮೆಚ್ಚುವಂಥ ಕೆಲಸಗಳು ನಡೆಯುತ್ತಿದೆ ಎಂದು ತುಮಕೂರಿನ ಹೆಚ್.ಎಂ.ಟಿ. ಜನರಲ್ ಮ್ಯಾನೇಜರ್ ಡಿ. ಗಜಾನನ್ ದೇವಗಿರಿಕರ್ ಹೇಳಿದರು.
ಚೇಳೂರಿನ ಭಾವಸಾರಕ್ಷತ್ರಿಯ ಸಮಾಜದ ವತಿಯಿಂದ ಶ್ರೀ ಪಾಂಡುರಂಗರುಕ್ಮುಣಿ ದೇವಾಲದಲ್ಲಿ ನಡೆದ ಸಂಘಟನೆ ಸಭೆಯಲ್ಲಿ ಸನ್ಮಾನಗೊಂಡು ಮಾತನಾಡುತ್ತ ಎಲ್ಲಿ ಉತ್ತಮವಾದ ಸಂಘಟನೆಯಿರುತ್ತದೆಯೋ ಅಲ್ಲಿ ಉತ್ತಮವಾದ ಕೆಲಸ ಕಾರ್ಯಗಳು ನಡೆಯುತ್ತದೆ. ಇಲ್ಲಿ ನನ್ನದು ನಿನ್ನದು ಎಂಬ ಭೇದ ಭಾವ ಬಿಟ್ಟು ಕೆಲಸ ಮಾಡುವುದು ಅತಿ ಮುಖ್ಯವಾಗಿದೆ. ಹೆಚ್ಚು ಜನಸಂಖ್ಯೆಯಿದ್ದರೇ ಸಾಲದು ಎಲ್ಲರಲ್ಲೂ ನಾವೆಲ್ಲರೂ ಬೆಳೆಯ ಬೇಕು ಎಂಬ ಭಾವನೆ ಬರಬೇಕು. ಆಗಲೇ ಆ ಹೆಚ್ಚಿನ ಜನಸಂಖ್ಯೆಯಿರುವ ಸಂಘಟನೆಗಳ ಕೆಲಸ ಕಾರ್ಯಗಳಿಗೆ ಉತ್ತಮವಾದ ಪ್ರತಿಕ್ರಿಯೆ ಬಂದು ಹೆಚ್ಚಿಗೆ ಪ್ರೋತ್ಸಾಹ ಸಿಗುತ್ತದೆ ಎಂದರು.
ಎಷ್ಟೋ ಕಡೆ ಈಗ ಕಮ್ಮಿ ಜನಸಂಖ್ಯೆಯಿರುವವರು ಉತ್ತಮವಾದ ಸಾಧನೆ ಮಾಡಿರುವ ನಿರ್ದೇಶನಗಳು ಬಹಳಷ್ಟಿವೆ. ಅಂತಹದರಲ್ಲಿ ಚೇಳೂರಿನ ಶ್ರೀ ಪಾಂಡುರಂಗ ದೇವಾಲಯ ಒಂದು. ಇಲ್ಲಿನ ಸಮಾಜದಲ್ಲಿ ಕಮ್ಮಿ ಜನಸಂಖ್ಯೆಯಿದ್ದು ಇವರು ಎಲ್ಲರ ಸಹಕಾರವನ್ನು ಉತ್ತಮವಾಗಿ ಪಡೆದುಕೊಂಡು ಒಳ್ಳೆಯ ದೇವಾಲಯ ನಿರ್ಮಾಣವಾಗಿದೆ ಎಂದರು. ಭಾವಸಾರಕ್ಷತ್ರಿಯ ಸಮಾಜದ ವಲಯ ಅಧ್ಯಕ್ಷ ಪಿ.ಎಸ್. ಗುರುಪ್ರಸಾದ್ ಮಾತನಾಡಿ ನಮ್ಮಲ್ಲಿ ಪ್ರೀತಿ ಭಾವನೆ ತುಂಬಿಕೊಂಡರೆ ಎಲ್ಲರೂ ನಮ್ಮನ್ನು ಒಳ್ಳೆಯ ಭಾವನೆಯಿಂದ ನೋಡುತ್ತಾರೆ. ಅಂತಹ ವಾತಾವರಣ ನಿರ್ಮಾಣವಾಗುವ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಬೇಕು ಎಂದರು. ಚೇಳೂರಿನ ಭಾವಸಾರಕ್ಷತ್ರಿಯ ಸಮಾಜದ ಅಧ್ಯಕ್ಷ ಸಿ.ಟಿ. ಕಾಂತರಾಜ್ ರಾವ್, ಕಮಿಟಿ ಅಧ್ಯಕ್ಷ ಎಚ್.ಕೆ. ಗಂಗಾಧರ್ ರಾವ್, ಕಾರ್ಯದರ್ಶಿ ಸಿ.ಕೆ. ವಾಸುದೇವರಾವ್, ಸಹ ಕಾರ್ಯದರ್ಶಿ ಸಿ.ಟಿ. ಮೋಹನ್ ರಾವ್, ಗಣೇಶ್ ಶರ್ಮ, ರೇಣುಕಾ ಪ್ರಸಾದ್ ಹಾಗೂ ಸಮಾಜ ಬಾಂದವರು ಹಾಜರಿದ್ದರು.