ಹೊಟ್ಟೆ ನೋವು ತಾಳಲಾರದೆ ಗೃಹಿಣಿ ಆತ್ಮಹತ್ಯೆ
ಕುಣಿಗಲ್: ಹೊಟ್ಟೆ ನೋವು ತಾಳಲಾರದೆ ಗೃಹಿಣಿಯೊಬ್ಬಳು ಮನೆಯಲ್ಲಿಯೇ ನೇಣಿಗೆ ಶರಣಾಗಿರುವ ಘಟನೆ ತಾಲೂಕಿನ ಅಮೃತೂರು ಪೊಲೀಸ್ ಠಾಣೆ ವ್ಯಾಪ್ತಿಯ ಜಲಧಿಗೆರೆ ಗ್ರಾಮದಲ್ಲಿ ಸಂಭವಿಸಿದೆ.
ಮೃತಳನ್ನು ಅಮೃತೂರಿನ ನರಸಿಂಹಮೂರ್ತಿಯವರ ಮೂರನೇ ಮಗಳಾದ ವಿಜಯಲಕ್ಷ್ಮಿ(36) ಎಂದು ಗುರುತಿಸಲಾಗಿದೆ. ಈಕೆಗೆ ಹತ್ತು ವರ್ಷದ ಹಿಂದೆ ಜಲಧಿಗೆರೆ ಗ್ರಾಮದ ಕಾಂತರಾಜು ಎಂಬವರೊಂದಿಗೆ ವಿವಾಹವಾಗಿದ್ದು, ಏಳು ವರ್ಷದ ಮಗನಿದ್ದಾನೆ. ಆಕೆ ಹೊಟ್ಟೆನೋವಿನಿಂದ ಬಳಲುತ್ತಿದ್ದು, ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಳು.
ಹೊಟ್ಟೆ ನೋವು ಬಾಧೆ ತಡೆಯಲಾರದೆ, ಬುಧವಾರ ಸಂಜೆ ಜಲಧಿಗೆರೆಯ ಗಂಡನ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ.
ವಿಷಯ ತಿಳಿದು ಆಗಮಿಸಿ ತಂದೆ ನರಸಿಂಹಮೂರ್ತಿ ನೀಡಿದ ದೂರಿನ ಮೇರೆಗೆ ಅಮೃತೂರು ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.