ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಇಂದಿನಿಂದ ರಂಗಾಪುರದಲ್ಲಿ ಗುರುಸಪ್ತಾಹ ಪ್ರಾರಂಭ

Mainashree
Updated On : 31 Jan 2014, 10:37 am

ತಿಪಟೂರು: ತಾಲೂಕಿನ ಕೆರೆಗೋಡಿ-ರಂಗಾಪುರ ಸುಕ್ಷೇತ್ರದಲ್ಲಿ  ಗುರುಸಪ್ತಾಹ, ಆರನೇಯ  ಗುರುಪರದೇಶಿಕೇಂದ್ರ ಸ್ವಾಮೀಜಿಯವರ ದೇವಾಲಯ ಪ್ರವೇಶ ಹಾಗೂ ಶಿಲಾಮೂರ್ತಿ ಪ್ರತಿಷ್ಠಾಪನಾ ಮತ್ತು ಹದಿಮೂರನೇ ವಾರ್ಷಿಕ ಮಹೋತ್ಸವ ಕಾರ್ಯಕ್ರಮವು  ಗುರುಪರದೇಶಿಕೇಂದ್ರ ಸ್ವಾಮೀಜಿಯವರ ನೇತೃತ್ವದಲ್ಲಿ  ಫೆ.1ರಿಂದ  ವಿಜೃಂಭಣೆಯಿಂದ ನಡೆಯಲಿದೆ.  ಫೆ.5ರಂದು ಆರನೆಯ ಶ್ರೀಗಳ ದೇವಾಲಯ ಪ್ರವೇಶ ಹಾಗೂ ಶಿಲಾಮೂರ್ತಿ ಪ್ರತಿಷ್ಠಾಪನೆ, ಐದು ಮತ್ತು ಆರನೆ ಶ್ರೀಗಳ ಗದ್ದುಗೆಗೆ ಮಹಾಭಿಷೇಕ, ರುದ್ರಹೋಮ, ಸಹಸ್ರ ಬಿಲ್ವಾರ್ಚನೆ ವಿಶೇಷ ಹೂವಿನ ಅಲಂಕಾರ ಮಾಡಲಾಗುವುದು. ಅಂದೇ ಬೆಳಿಗ್ಗೆ 11.30ಕ್ಕೆ ಧಾರ್ಮಿಕ ಸಮಾರಂಭ ನಡೆಯಲಿದೆ. ಮಠಾಧಿಪತಿಗಳು, ಸಚಿವರು, ಗಣ್ಯರು ಪಾಲ್ಗೊಳ್ಳಲಿದ್ದಾರೆ. ಸಂಜೆ 6.30ಕ್ಕೆ  ಪರದೇಶಿಕೇಂದ್ರ ಸ್ವಾಮೀಜಿ ವಿದ್ಯಾಪೀಠದ ಶಾಲಾ ಕಾಲೇಜುಗಳ ವಾರ್ಷಿಕೋತ್ಸವದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಗುವುದು. ರಾತ್ರಿ 10.30ಕ್ಕೆ ಶ್ರೀ ಶಂಕರೇಶ್ವರ ಸ್ವಾಮಿ ಉತ್ಸವವು ವಿವಿಧ ಜಾನಪದ ಕಲಾತಂಡಗಳೊಂದಿಗೆ ಅದ್ಧೂರಿಯಾಗಿ ನಡೆಯಲಿದೆ. ಫೆ.6ರಂದು ರಥಸಪ್ತಮಿ ಪ್ರಯುಕ್ತ ಕೆರೆಗೋಡಿಯಲ್ಲಿ ಶಂಕರೇಶ್ವರ ಸ್ವಾಮಿ ಸೂರ್ಯ ಮಂಡಲೋತ್ಸವ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement