ಎಸ್ಸಿಎಂಎಸ್ಗೆ ರನ್ನರ್ ಅಪ್ ಪಟ್ಟ
ತುಮಕೂರು: ನಗರದ ಶ್ರೀ ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಧಾರವಾಡದಲ್ಲಿ ಇತ್ತೀಚೆಗೆ ನಡೆದ ಎರಡು ದಿನಗಳ ರಾಜ್ಯಮಟ್ಟದ ಮಾಧ್ಯಮೋತ್ಸವದಲ್ಲಿ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ರನ್ನರ್ ಅಪ್ ಸ್ಥಾನ ಗಿಟ್ಟಿಸಿಕೊಂಡರು.
ಶ್ರೀ ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ಎಂ.ಎಸ್ಸಿ. (ಎಲೆಕ್ಟ್ರಾನಿಕ್ ಮಿಡಿಯಾ) ಮತ್ತು ಎಂ.ಎಸ್. ಕಮ್ಯುನಿಕೇಷನ್ನ ಎರಡು ತಂಡಗಳು ವಿವಿಧ ಸ್ಪರ್ಧೆಗಳಲ್ಲಿ 6 ಪ್ರಥಮ ಬಹುಮಾನಗಳು ಸೇರಿದಂತೆ ಒಟ್ಟು 13 ಬಹುಮಾನಗಳನ್ನು ತನ್ನದಾಗಿಸಿಕೊಂಡಿತು.
ಕರ್ನಾಟಕ ವಿ.ವಿ. ಕುಲಪತಿ ಪ್ರೊ.ಎಚ್.ಬಿ. ವಾಲೀಕಾರ್, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ.ಎ. ಪೊನ್ನಪ್ಪ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಂಗಾಧರ್ ಮೊದಲಿಯಾರ್, ಧಾರವಾಡ ಆಕಾಶವಾಣಿಯ ಮುಖ್ಯಸ್ಥ ಸಿ.ಯು. ಬೆಳ್ಳಕ್ಕಿಯವರು ಬಹುಮಾನಗಳನ್ನು ವಿತರಿಸಿದರು.
ಬಹುಮಾನ ವಿಜೇತರ ಪಟ್ಟಿ: ವರದಿಗಾರಿಕೆ: ರಮ್ಯಶ್ರೀ ಜಿ.ಎನ್. (ತೃತೀಯ ಸ್ಥಾನ), ಪಿಕ್ ಅಂಡ್ ನರೇಟ್ ಸ್ವರ್ಣಶ್ರೀ (ದ್ವಿತೀಯ ಸ್ಥಾನ) ಮ್ಯಾಡ್ ಆಡ್ ಶೋ ನವೀನ್ ಕುಮಾರ್ ಎಸ್, ಮಂಜುನಾಥ್ ಎಚ್.ಆರ್., ವೇದಾನಂದ್ ಕುಮಾರ್, ಸುಧಾಕರ್ ಮತ್ತು ತಂಡ (ದ್ವಿತೀಯ ಸ್ಥಾನ), ನ್ಯೂಸ್ ಕಾಸ್ಟಿಂಗ್: ಸ್ವರ್ಣಶ್ರೀ ಮತ್ತು ತಂಡ (ದ್ವಿತೀಯ ಸ್ಥಾನ), ಸೆಲೆಬ್ರಟಿಗಳ ಸಂದರ್ಶನ: ಚೇತನಾರಾಧ್ಯ ಮತ್ತು ಮಂಜುನಾಥ್ (ದ್ವಿತೀಯ ಸ್ಥಾನ), ಫೋಟೋಗ್ರಫಿ: ನವೀನ್ ಕುಮಾರ್ ಎನ್. (ಪ್ರಥಮಸ್ಥಾನ), ಪುಟ ವಿನ್ಯಾಸ: ಬಾಬು ಮತ್ತು ರಮ್ಯಶ್ರೀ ಜಿ.ಎನ್. (ಪ್ರಥಮಸ್ಥಾನ), ಚೇತನಾರಾಧ್ಯ ಮತ್ತು ನವೀನ್ (ದ್ವಿತೀಯ ಸ್ಥಾನ), ಪೀಸ್ ಟು ಕ್ಯಾಮೆರಾ: ಸ್ವರ್ಣಶ್ರೀ (ಪ್ರಥಮಸ್ಥಾನ), ಮಂಜುನಾಥ್ (ತೃತೀಯ ಸ್ಥಾನ), ನ್ಯೂಸ್ ಚಿಟ್: ಚಾಟ್ ಚೇತನಾರಾಧ್ಯ ಮತ್ತು ಮಂಜುನಾಥ್ (ಪ್ರಥಮಸ್ಥಾನ), ಆಂಕರ್ ಪೋರ್ಷನ್ ಆಫ್ ಟಿವಿ ಪ್ರೋಗ್ರಾಂ: ಸ್ವರ್ಣಶ್ರೀ (ಪ್ರಥಮಸ್ಥಾನ), ಮೀಡಿಯಾ ಕ್ವಿಜ್ ಭಾನುಪ್ರಸಾದ್ ಮತ್ತು ತಂಡ (ತೃತೀಯ ಸ್ಥಾನ)
ಅಭಿನಂದನೆ: ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳ ಸಾಧನೆಗೆ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಜಂಟಿ ಕಾರ್ಯದರ್ಶಿ ಡಾ. ಜಿ. ಪರಮೇಶ್ವರ್, ಆಡಳಿತಾಧಿಕಾರಿ ಸಿ.ಎನ್. ನರಸಿಂಹಮೂರ್ತಿ ಹಾಗೂ ನಿರ್ದೇಶಕ ಡಾ. ಬಿ.ಟಿ. ಮುದ್ದೇಶ್ ಅಭಿನಂದನೆ ಸಲ್ಲಿಸಿದ್ದಾರೆ.