ಅನುಭವವಿಲ್ಲದ ಕವಿಗಳು ಗುಡಾರದ ಕವಿಗಳಿದ್ದಂತೆ: ವಿದ್ಯಾವಾಚಸ್ಪತಿ ಕವಿತಾಕೃಷ್ಣ
ತುಮಕೂರು: ಪ್ರಾಪಂಚಿಕ ಅನುಭವವಿಲ್ಲದ ಕವಿಗಳು ಗುಡಾರದ ಕವಿಗಳಿದ್ದಂತೆ ಎಂದು ವಿದ್ಯಾವಾಚಸ್ಪತಿ ಕವಿತಾಕೃಷ್ಣ ಅಭಿಪ್ರಾಯಪಟ್ಟರು.
ಕ್ಯಾತ್ಸಂದ್ರ ಕವಿತಾಕೃಷ್ಣ ಸಾಹಿತ್ಯ ಮಂದಿರದಲ್ಲಿ ಮಹಿಳಾ ಮಕ್ಕು ಮಕ್ಕಳ ಸಾಹಿತ್ಯ ಕೂಟ ಆಯೋಜಿಸಿದ್ದ ಹರಿಕಥಾ ವಿದ್ವಾನ್ ಶಂಕರಣ್ಣ ದಾಸ್ ಅಭಿನಂದನಾ ಸಮಾರಂಭ ಹಾಗೂ ಚುಟುಕು ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿ, ನಾವಿಂದು ಅಜ್ಞಾನಗಳ ಸಂಕುಚಿತ ಮನೆಯಲ್ಲಿ ವಾಸಿಸುತ್ತಿದ್ದೇವೆ. ಈ ಬ್ರಾಮಕ ಪ್ರಪಂಚದಿಂದ ಹೊರಬರಬೇಕಾಗಿದೆ. ಕಾಲ ಧರ್ಮಕ್ಕನುಗುಣವಾಗಿ ನಾವು ಬದಲಾಗಬೇಕು ಎಂದರು.
ವಿದ್ವಾನ್ ಶಂಕರಣ್ಣ ದಾಸ್ ಕಾವ್ಯ ಪ್ರಯೋಗ ಪರಿಣತ ಮತಿಗಳ ಪರಂಪರೆಗೆ ಸೇರಿದವರಾಗಿದ್ದಾರೆ. ಹಾಗೆಯೇ ಕಾಯಕ ಯೋಗಿಗಳಾಗಿದ್ದಾರೆ ಎಂದು ಶ್ಲಾಘಿಸಿದರು.
ಚುಟುಕು ಕವಿಗೋಷ್ಠಿಯಲ್ಲಿ ಆಶಯ ನುಡಿಗಳನ್ನಾಡಿದ ಜಿ.ಕೆ. ಕುಲಕರ್ಣಿ, ಚುಟಕು ಸಾಹಿತ್ಯ ಹಿಂದಿಯ ಚೋಟಕ್ನಿಂದ ಬಂದು ಕನ್ನಡದಲ್ಲಿ ಚುಟುಕು ಎಂದಾಗಿದೆ. ಇಂದಿನ ವೇಗದ ಜೀವನಕ್ಕೆ ಚುಟುಕು ಸಾಹಿತ್ಯ ಬೆಳೆದು ಬಂದು, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಉನ್ನತ ಸ್ಥಾನ ಅಲಂಕರಿಸಿದೆ ಎಂದರು. ಕೆಜಿಎಲ್ ರವಿ, ಕಮಲ ಬಡ್ಡೀಹಳ್ಳಿ ಇದ್ದರು.