ಅಪರಿಚಿತ ವ್ಯಕ್ತಿ ಶವ ಪತ್ತೆ
ತುರುವೇಕೆರೆ: ತಾಲೂಕಿನ ಮಾಯಸಂದ್ರದ ಕೆರೆಯಲ್ಲಿ ಸುಮಾರು 55ರಿಂದ 60 ವರ್ಷದ ಪುರುಷನ ಶವ ಪತ್ತೆಯಾಗಿದೆ. ಸೋಮವಾರ ಬೆಳಗ್ಗೆ ನೀರಿಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ.
ಕೆರೆಯ ದಡದಲ್ಲಿ ಅವರು ಧರಿಸಿದ್ದ ಬಿಳಿ ಬಣ್ಣದ ಚೌಕುಳಿಯ ಶರ್ಟ್, ಕನ್ನಡಕ ಇಟ್ಟಿದ್ದಾರೆ. ಸಿಮೆಂಟ್ ಕಲರ್ ಪ್ಯಾಂಟ್ ಧರಿಸಿದ್ದಾರೆ. ಬಿಳಿ ಕೂದಲು, ಹೊಟ್ಟೆಯ ಎಡಭಾಗದಲ್ಲಿ ಮತ್ತು ಬಲಗಾಲಿನ ಮೊಳಕಾಲಿನ ಮೇಲೆ ಹಳೇ ಗಾಯದ ಗುರುತು ಇದೆ. ಶವವನ್ನು ತುರುವೇಕೆರೆ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಾರಸುದಾರರಿದ್ದಲ್ಲಿ 08139-287334ಗೆ ಕರೆ ಮಾಡಬೇಕೆಂದು ಪೊಲೀಸರು ತಿಳಿಸಿದ್ದಾರೆ.