ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಪಡಿತರ ಅವ್ಯವಸ್ಥೆ ಸರಿಪಡಿಸಿ

Rashmi Kasaragodu
Updated On : 2 Jul 2014, 1:07 am

ತುಮಕೂರು: ತುಮಕೂರು ತಾಲೂಕು ಗೂಳೂರು ಹೋಬಳಿ ದೊಡ್ಡಸಾರಂಗಿ ಮತ್ತು ದೊಡ್ಡಸಾರಂಗಿಪಾಳ್ಯದ ಗ್ರಾಮಸ್ಥರು ಹಾಲಿ ಇರುವ ಕರಡಗೆರೆ ಪಡಿತರ ಅಂಗಡಿಯಲ್ಲಿಯೇ ಪಡಿತರದಾರರಿಗೆ ಪಡಿತರ ವಿತರಿಸಲು ಅನುಕೂಲ ಕಲ್ಪಿಸಿಕೊಡುವಂತೆ ಒತ್ತಾಯಿಸಿ ತಾಪಂ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ ಹಾಗೂ ಗ್ರಾಪಂ ಸದಸ್ಯ ಶಂಕರಣ್ಣ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ದೊಡ್ಡಸಾರಂಗಿ ಮತ್ತು ದೊಡ್ಡಸಾರಂಗಿಪಾಳ್ಯದ ಗ್ರಾಮಸ್ಥರು ಈ ಹಿಂದೆ ಸರ್ಕಾರದಿಂದ ನೀಡಿರುವ ಪಡಿತರ ವಸ್ತುಗಳನ್ನು ಅಂಗಡಿ ಸಂಖ್ಯೆ-91ರ ಜಿ.ಮೂರ್ತಿ ಅವರ ನ್ಯಾಯಬೆಲೆಯಲ್ಲಿ ಪಡೆಯುತ್ತಿದ್ದರು. ಆದರೆ ಸದರಿ ದೊಡ್ಡಸಾರಂಗಿಪಾಳ್ಯದ ಅಂಗಡಿ ನಂ.91ರಲ್ಲಿ ಸರಿಯಾದ ಪ್ರಮಾಣದಲ್ಲಿ ವಿತರಣೆ ಮಾಡುತ್ತಿಲ್ಲ ಹಾಗೂ ಪಡಿತರದಾರರ ಹತ್ತಿರ ಅನುಚಿತವಾಗಿ ವರ್ತಿಸುತ್ತಿದ್ದು, ಕಾಳಸಂತೆಯಲ್ಲಿ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು ಎಂಬ ಕಾರಣಕ್ಕೆ ಆರು ತಿಂಗಳ ಹಿಂದೆ ಈ ಅಂಗಡಿಯ ಪರವಾನಗಿಯನ್ನು ರದ್ದು ಮಾಡಲಾಗಿದೆ ಎಂದಿದ್ದಾರೆ.
ಇದೀಗ ಪುನಃ ಜಿ.ಮೂರ್ತಿ ಅವರಿಗೆ ಅನುಮೋದನೆ ನೀಡಲಾಗಿದೆ. ಈ ಅನುಮೋದನೆಯನ್ನು ವಜಾ ಮಾಡಿ.
ಆದರೆ ಜಿ. ಮೂರ್ತಿ ಅವರ ನ್ಯಾಯಬೆಲೆ ಅಂಗಡಿ ಪರವಾನಗಿ ರದ್ದು ಮಾಡಿದ್ದರಿಂದ ಇಲ್ಲಿನ ಎಲ್ಲ ಪಡಿತರದಾರರು ಹಾಲಿ ಕರಡಿಗೆರೆ ನ್ಯಾಯಬೆಲೆ ಅಂಗಡಿಯಲ್ಲಿ ತಮ್ಮ ಪಾಲಿನ ಪಡಿತರ ಧಾನ್ಯಗಳನ್ನು ಪಡೆಯುತ್ತಿದ್ದಾರೆ. ಹಾಗಾಗಿ ದೊಡ್ಡಸಾರಂಗಿ ಮತ್ತು ದೊಡ್ಡಸಾರಂಗಿಪಾಳ್ಯದ ಗ್ರಾಮಸ್ಥರ ಪಡಿತರ ವಸ್ತುಗಳನ್ನು ಜಿ.ಮೂರ್ತಿ ಅವರ ಅಂಗಡಿಗೆ ಪುನಃ ಬದಲಾಯಿಸದಂತೆ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಒಂದು ವೇಳೆ ಸರ್ಕಾರ ದೊಡ್ಡಸಾರಂಗಿಪಾಳ್ಯದ ಅಂಗಡಿ ನಂ.19, ಜಿ. ಮೂರ್ತಿ ಅವರಿಗೆ ಅಂಗಡಿಯನ್ನು ಮುಂದುವರೆಸಲು ಅವಕಾಶ ಮಾಡಿಕೊಟ್ಟರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಗ್ರಾಮಸ್ಥರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement