ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ವಿಳಂಬಕ್ಕೆ ತಾಂತ್ರಿಕ ತೊಂದರೆ ಕಾರಣ

Rashmi Kasaragodu
Updated On : 2 Jul 2014, 1:06 am

ಗುಬ್ಬಿ: ಪಪಂನ ಶೇ.22.75 ಮೀಸಲು ಅನುದಾನದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ವಿತರಿಸಬೇಕಾದ ಅಡುಗೆ ಅನಿಲ ಸಂಪರ್ಕದ ವಿಳಂಬಕ್ಕೆ ಚುನಾವಣಾ ನೀತಿ ಸಂಹಿತೆ ಹಾಗೂ ಕಂಪನಿಯ ತಾಂತ್ರಿಕ ತೊಂದರೆ ಕಾರಣವಾಗಿದೆ ಎಂದು ಇಂಡೇನ್ ಗ್ಯಾಸ್ ಏಜೆನ್ಸಿಯ ರುದ್ರೇಶ್ವರ ಎಂಟರ್ ಪ್ರೈಸಸ್ ಮಾಲೀಕ ಪಿ.ಬಿ. ಚಂದ್ರಶೇಖರಬಾಬು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2008-09 ನೇ ಸಾಲಿನಲ್ಲಿ ಅಡುಗೆ ಅನಿಲ ಸಂಪರ್ಕಕ್ಕೆ ರು. 3.17 ಲಕ್ಷ ಹಾಗೂ 2011-12 ರಲ್ಲಿ ರು. 5 ಲಕ್ಷ ಮೀಸಲು ಅನುದಾನವಾಗಿ ಬಿಡುಗಡೆ ಮಾಡಲಾಗಿದೆ. ಆದರೆ ಆಮೆಗತಿಯಲ್ಲಿ ಸಾಗಿದ ಟೆಂಡರ್ ಪ್ರಕ್ರಿಯೆ ಕಳೆದ ಮೂರು ತಿಂಗಳ ಹಿಂದೆ ನಡೆಸಲಾಗಿದೆ.
ನಿಯಾಮಾನುಸಾರ ಟೆಂಡರ್ ಪ್ರಕ್ರಿಯೆ ನಡೆಸಲು ಜಿಲ್ಲಾಧಿಕಾರಿಗಳ ಆದೇಶ ಪಡೆದು ಟೆಂಡರ್ ನಡೆಸಿದ ನಂತರ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ. ಇಂಡೇನ್ ಕಂಪನಿ ಸಿಲೆಂಡರ್ ಬುಕ್ಕಿಂಗ್‌ಗೆ ಐವಿಆರ್‌ಎಸ್ ತಂತ್ರಜ್ಞಾನ ಬಳಕೆ ಮಾಡಲು ಅನಿಲ ಸಂಪರ್ಕಕ್ಕೆ ತಾತ್ಕಾಲಿಕ ತಡೆ ತಂದಿತ್ತು. ಈ ನಡುವೆ ಆಯ್ಕೆಯಾದ 170 ಫಲಾನುಭವಿಗಳ ದಾಖಲಾತಿಗಳ ಪರಿಶೀಲನೆ ನಡೆಸಬೇಕಿದೆ. ಈ ನಿಯಮಗಳ ಪಾಲನೆಗೆ ಸಮಯದ ಅಗತ್ಯವಿದೆ. ಈ ತೊಡಕಿನ ಬಗ್ಗೆ ತಿಳಿಯದೆ ಸಲ್ಲದ ಹೇಳಿಕೆ ನೀಡಿದ ಪಪಂ ಸದಸ್ಯ ಜಿ.ಸಿ. ನರಸಿಂಹಮೂರ್ತಿ ಆರೋಪ ಸತ್ಯಕ್ಕೆ ದೂರವಾದದು ಎಂದು ತಿಳಿಸಿದರು.
ಪಪಂ ಆಯ್ಕೆ ಮಾಡಿದ ಫಲಾನುಭವಿಗಳಲ್ಲಿ ಕೆಲವರ ದಾಖಲಾತಿ ಈ ಹಿಂದೆ ಸಂಪರ್ಕ ಪಡೆದಿರುವವರ ದಾಖಲಾತಿಗೆ ಹೊಂದಾಣಿಕೆ ಆಗುತ್ತಿದೆ. ಸಿಲೆಂಡರ್ ಬೆಲೆಯಲ್ಲಿ ವ್ಯತ್ಯಾಸದ ಬಗ್ಗೆ ಪಪಂಗೆ ತಿಳಿಸಲಾಗಿದೆ. ಈ ಎಲ್ಲಾ ಪ್ರಕ್ರಿಯೆ ನಡೆಸಿದ ಕೂಡಲೇ ಫಲಾನುಭವಿಗಳಿಗೆ ಅನಿಲ ಸಂಪರ್ಕ ಒದಗಿಸಲಾಗುವುದು ಎಂದ ಅವರು, ರು. 60 ಲಕ್ಷ ಜಿಪಂ ಅನುದಾನದಲ್ಲಿ ತಾಲೂಕಿನ ಬೈಚೇನಹಳ್ಳಿ, ಎಂಎಂಎ ಕಾವಲ್ ಹಾಗೂ ಮಾರನಹಳ್ಳಿ ಗ್ರಾಮಕ್ಕೆ ಒಟ್ಟು ಮೂರು ಓವರ್ ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಕಳೆದ 8 ತಿಂಗಳ ಹಿಂದೆ ಗುತ್ತಿಗೆ ನೀಡಲಾಗಿತ್ತು. ಈವರೆಗೂ ಕಾಮಗಾರಿ ಆರಂಭಿಸದ ಗುತ್ತಿಗೆದಾರರ ಬಗ್ಗೆ ಸಿಇಒ ಕ್ರಮ ಕೈಗೊಳ್ಳಬೇಕು. ಜನಪ್ರತಿನಿಧಿಗಳಿಗೆ ಕಳಂಕ ಹೊರೆಸುವ ಇಂತಹ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಆಗ್ರಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement