ಇತಿಹಾಸ ಮರೆತರೆ ಬದುಕು ದುರ್ಬರ
ಮಧುಗಿರಿ: ಇತಿಹಾಸ ವರ್ತಮಾನ ಮತ್ತು ಭವಿಷ್ಯದ ಕೊಂಡಿ. ಇತಿಹಾಸ ಮರೆತವರು ಬದುಕನ್ನು ರೂಪಿಸಿಕೊಳ್ಳಲಾರರು ಎಂದು ಹಿರಿಯ ಸಾಹಿತಿ ಪ್ರೊ.ಮ.ಲ.ನ.ಮೂರ್ತಿ ಹೇಳಿದರು.
ತಾಲೂಕು ಕಸಾಪ ಆಶ್ರಯದಲ್ಲಿ ಏರ್ಪಡಿಸಿದ್ದ ಲೇಖಕ ಎಂ.ಡಿ.ಶ್ರೀನಿವಾಸ್ ಅವರು ರಚಿಸಿರುವ “ÈÚߨÚßW ಏಕಶಿಲಾ ·ælo’ ಕೃತಿ ಬಿಡುಗಡೆ ಮಾಡಿ ಮಾತನಾಡಿ, ಜಾಗತೀಕರಣ ಸ್ಥಳೀಯ ಇತಿಹಾಸವನ್ನು ನುಂಗುವ ನಿಟ್ಟಿನಲ್ಲಿ ಏಕ ಮುಖ ಸಂಸ್ಕೃತಿ ರೂಪಿಸುತ್ತಿದೆ. ಬೆಟ್ಟದ ಕಲ್ಲು ಕಲ್ಲಿಗೂ ಕಥೆಯಿದ್ದು ಬಲ್ಲವರು ಅಕ್ಷರದಲ್ಲಿ ಹಿಡಿದಿಡುವ ಮೂಲಕ ನಮ್ಮ ಮುಂದಿನ ಪೀಳಿಗೆಗೆ ಆಸ್ತಿಯಾಗಬೇಕು. ಸಂಶೋಧಕರು ಶೋಧನೆ ಮಾಡಲು ಈ ಪುಸ್ತಕ ನೆರವಾಗುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಿ.ಸಿದ್ದಗಂಗಪ್ಪ ಲೇಖಕರೊಂದಿಗಿನ ಒಡನಾಟವನ್ನು ನೆನಪಿಸಿ ಅವರಿಂದ ಹೆಚ್ಚು ಹೆಚ್ಚು ಕೃತಿಗಳು ಮೂಡಿ ಬರಲಿ ಎಂದು ಶುಭ ಕೋರಿದರು.
ಪಿಎಸ್‌ಐ ಅಂಬರೀಷ್ ಮಾತನಾಡಿ, ಸಾಹಿತ್ಯ ಪರಿಷತ್ತಿನ ಕಾರ್ಯ ಚಟುವಟಿಕೆಗಳು ಸಮಾರಂಭಗಳಿಗೆ ಸೀಮಿತವಾಗದೇ ರಚನಾತ್ಮಕವಾಗಿ ರೂಪಗೊಳ್ಳಬೇಕು ಎಂದರು.
ಕಸಾಪ ಅಧ್ಯಕ್ಷ ಚಿ.ಸೂ.ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಲೇಖಕ ಎಂ.ಡಿ.ಶ್ರೀನಿವಾಸ್, ನಿವೃತ್ತ ಸಮಾಜ ಕಲ್ಯಾಧಿಕಾರಿ ನಂಜುಂಡಯ್ಯ ಮಾತನಾಡಿದರು. ನೌಕರರ ಸಂಘದ ಅಧ್ಯಕ್ಷ ಎನ್.ಮಹಾಲಿಂಗೇಶ್, ಲೇಖಕಿ ವಿಜಯಮೋಹನ್, ಪ್ರೊ.ಸಿ.ಕೃಷ್ಣಪ್ಪ, ಎಂ.ಎಸ್.ನಂಜುಂಡರಾವ್ ತಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ರವಿಶಂಕರ್, ಪತ್ರಕರ್ತರ ಸಂಘದ ಅಧ್ಯಕ್ಷ ಚಂದ್ರಕಾಂತ್ ಇದ್ದರು. ರಜಾಲಿ ಪ್ರಾರ್ಥಿಸಿ, ಖಜಾಂಚಿ ಸುದರ್ಶನ್ ಬಾಬು ಸ್ವಾಗತಿಸಿ, ದ್ರೇಹಾಚಾರ್ ನಿರೂಪಿಸಿ, ಎಂ.ಎನ್.ನರಸಿಂಹಮೂರ್ತಿ ವಂದಿಸಿದಿರು.