ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಉಚಿತ ರಕ್ತ ಗುಂಪು ಪರೀಕ್ಷಾ ಶಿಬಿರ ನಾಳೆ

Rashmi Kasaragodu
Updated On : 5 Jul 2014, 12:36 pm

ತುಮಕೂರು: ತುಮಕೂರು ಮಣಿಪಾಲ್ ಡಯಾಗ್ನೋಸ್ಟಿಕ್ ಸೆಂಟರ್ ಸಹಯೋಗದೊಂದಿಗೆ ಕ್ರೇಜಿಸ್ಟಾರ್ ವಿ.ಆರ್.ಸಿ. ಗ್ರೂಪ್  ನೇತೃತ್ವದಲ್ಲಿ ಭಾನುವಾರಬೆಳಗ್ಗೆ 9 ಗಂಟೆಗೆ ತಾಲೂಕಿನ ಮೈದಾಳದಲ್ಲಿರುವ ಶಿವ ಶೈಕ್ಷಣಿಕ ಸೇವಾಶ್ರಮದಲ್ಲಿನ ಮಕ್ಕಳಿಗೆ ಉಚಿತ ರಕ್ತಗುಂಪು ಪರೀಕ್ಷಾ ಶಿಬಿರ ಹಾಗೂ ಸಾಯಿಬಾಬ ವೃದ್ಧಾಶ್ರಮದಲ್ಲಿರುವ ವಯೋವೃದ್ಧರಿಗೆ ಉಚಿತ ರಕ್ತದೊತ್ತಡ ಮತ್ತು ಮಧುಮೇಹ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ.  ಕಾರ್ಯಕ್ರಮದ ಉದ್ಘಾಟನೆಯನ್ನು ವರದಕ್ಷಿಣೆ ವಿರೋಧಿ ವೇದಿಕೆ ಪ್ರಧಾನ ಕಾರ್ಯದರ್ಶಿ ಸಾ.ಚಿ.ರಾಜಕುಮಾರ್  ನೆರವೇರಿಸುವರು. ವಿಶೇಷ ಅತಿಥಿಗಳಾಗಿ ತುಮಕೂರು ಮಣಿಪಾಲ್ ಡಯಾಗ್ನೋಸ್ಟಿಕ್ ಸೆಂಟರ್ ಮಂಜುನಾಥ್, ಕ್ರೇ. ವಿ.ಆರ್.ಸಿ. ಗ್ರೂಪ್ ರಾಜ್ಯ ಗೌರವಾಧ್ಯಕ್ಷ ವಿ. ರಾಮಮೂರ್ತಿ ಆಗಮಿಸುವರು. ಅಧ್ಯಕ್ಷತೆಯನ್ನು ಕ್ರೇ. ವಿ.ಆರ್.ಸಿ. ಗ್ರೂಪ್ ಜಿಲ್ಲಾಧ್ಯಕ್ಷ ಕೆ. ರಮೇಶ್ ವಹಿಸುವರು. ಮುಖ್ಯ ಅತಿಥಿಗಳಾಗಿ ಕ್ರೇ. ವಿ.ಆರ್.ಸಿ. ಗ್ರೂಪ್ ರಾಜ್ಯಾಧ್ಯಕ್ಷ ವಿಜಯಣ್ಣ, ರಾಷ್ಟ್ರೀಯ ಯುವ ಪ್ರಶಸ್ತಿ ವಿಜೇತ ಡಾ. ಸಂಜಯ್ನಾಯಕ್, ಸಮಾಜ ಸೇವಕ ನಾಗರಾಜು ಉಪಸ್ಥಿತರಿರುವರು. ಅತಿಥಿಗಳಾಗಿ ಡಯಾಗ್ನೋಸ್ಟಿಕ್ ಸೆಂಟರ್ನ ಟೆಕ್ನೀಷಿಯನ್ಗಳು ಸೇರಿದಂತೆ ಕ್ರೇಜಿ ಸ್ಟಾರ್ ವಿ.ಆರ್.ಸಿ. ಗ್ರೂಪ್ನ ರಾಜ್ಯ ಕಾರ್ಯದರ್ಶಿ ಮಾರುತಿ ಜಿ.ಹೆಚ್. ಚೇತನ್ ರಾಮಕೃಷ್ಣ, ಮೋಹನ್, ಬಾಲಾಜಿ, ವೆಂಕಟೇಶ್, ಅಶೋಕ್, ಸಂತೋಷ್ಗೌಡ, ಭೈರೇಶ್, ಸೇವಾಶ್ರಮದ ಪಾಲಾಕ್ಷಯ್ಯ ಉಪಸ್ಥಿತರಿರುವರು.         
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement