ಕಲೆ, ಸಂಸ್ಕೃತಿ ಮಾನವನ ಅವಿಭಾಜ್ಯ ಅಂಗ
ಪಾವಗಡ: ಕಲೆ ಮತ್ತು ಸಂಸ್ಕೃತಿ ಮಾನವನ ಅವಿಭಾಜ್ಯ ಅಂಗ. ಇಂತಹ ಕಾರ್ಯಕ್ರಮಗಳು ಗಡಿ ಭಾಗಗಳಲ್ಲಿ ಹೆಚ್ಚು ಹೆಚ್ಚು ನಡೆಯಬೇಕು ಎಂದು ತಾಲೂಕು ಕಸಾಪ ಅಧ್ಯಕ್ಷ ಅಂತರಗಂಗೆ ಶಂಕರಪ್ಪ ಅಭಿಪ್ರಾಯಪಟ್ಟರು.
ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪಂಚವಟಿ ಕಲಾ ಮತ್ತು ಕ್ರೀಡಾ ಸಂಘ ಕನ್ನಮೇಡಿ, ರಾಷ್ಟ್ರಪ್ರಗತಿ ಪ್ರೌಢಶಾಲೆ ಪಾವಗಡ ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಪಟ್ಟಣದ ರಾಷ್ಟ್ರಪ್ರಗತಿ ಪ್ರೌಢಶಾಲಾ ಅವರಣದಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಉತ್ಸವ ಸಮಾರಂಭದ ಉದ್ಘಾಟನಾ ಕಾರ್ಯಕ್ರಮ ನೆರೆವೇರಿಸಿ ಮಾತನಾಡಿದರು.
ಗಡಿ ಗ್ರಾಮೀಣ ಪ್ರದೇಶಗಳಲ್ಲಿ ಸಂಸ್ಕೃತಿ ಚಟವಟಿಕೆಗಳು ನಿರಂತರವಾಗಿ ನಡೆಬೇಕು. ಇಂಥ ಕಾರ್ಯಕ್ರಮಗಳಿಗೆ ಸರ್ಕಾರ ಪ್ರೋತ್ಸಾಹ ನೀಡುವ ಅನಿವಾರ್ಯತೆ ಇದ್ದು, ಸಂಸ್ಕೃತಿ ಕಾರ್ಯಕ್ರಮಗಳಲ್ಲಿ ಗ್ರಾಮೀಣ ಕಲಾವಿದರ ಪ್ರತಿಭೆ ಅಭಿವ್ಯಕ್ತಪಡಿಸಿಲು ಇಂಥ ವೇದಿಕೆಗಳು ಯೋಗ್ಯವಾಗಿವೆ ಎಂದು ಸಲಹೆ ನೀಡಿದರು.
ಜಾನಪದ ಕಲಾವಿದರ ಸಂಘದ ತಾಲೂಕು ಅಧ್ಯಕ್ಷ ಶಿಕ್ಷಕ ಟಿ.ಗಂಗಯ್ಯ ಮಾತನಾಡಿದರು. ಅಧ್ಯಕ್ಷತೆಯನ್ನು ಪುರಸಭೆ ಸದಸ್ಯ ಸುಧಾಕರರೆಡ್ಡಿ ವಹಿಸಿದ್ದರು.
ಗಡಿನಾಡು ಸಾಹಿತ್ಯ ಘಟಕದ ಹ.ರಾಮಚಂದ್ರಪ್ಪ ರಾಷ್ಟ್ರಪ್ರಗತಿ ವಿದ್ಯಾಸಂಸ್ಥೆಯ ಅಧ್ಯಕ್ಷ ಪಿ.ಎಚ್.ಸುಬ್ಬರಾಯಪ್ಪ,ಪುರಸಭೆ ಸದಸ್ಯ ವಸಂತ್ಕುಮಾರ್ ಹನುಮಂತ್, ಇಲಾಖೆ ಮಟ್ಟದ ಅಧಿಕಾರಿಗಳಾದ ಸಣ್ಣಪ್ಪ, ಲಕ್ಷ್ಮಣ್ ಸಿಂಗ್, ಮುಖ್ಯೋಪಾದ್ಯಾಯ ವೀರಚಿಕ್ಕಪ್ಪ, ಕಾರ್ಯದರ್ಶಿ ತಮ್ಮಣ್ಣ, ಮಂಜುಳ, ಮುತ್ಯಾಲಪ್ಪ ಇತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು