ಪಾಶ್ಚಾತ್ಯ ಸಂಸ್ಕೃತಿ ಅನುಕರಣೆ ಬೇಡ
ಕುಣಿಗಲ್: ಪಾಶ್ಚಿಮಾತ್ಯ ಸಂಸ್ಕೃತಿಗೆ ಇಂದಿನ ಯುವಜನಾಂಗ ಮಾರು ಹೋಗಿ ದೇಸಿಯ ಸಂಸ್ಕೃತಿಯನ್ನು ಕಡೆಗಣಿಸುತ್ತಿರುವುದು ವಿಶಾದಕರ ಎಂದು ತಾಪಂ ಪ್ರಭಾರ ಅಧ್ಯಕ್ಷ ಜಗದೀಶ್ ತಿಳಿಸಿದರು. ತಾಲೂಕಿ ಎಡೆಯೂರಿನ ವಿವೇಕಾನಂದ ಯುವಕ ಸಂಘದವರು ಸ್ವಾಮಿ ವಿವೇಕಾನಂದರ ಪುಣ್ಯತಿಥಿ ಅಂಗವಾಗಿ ಎಡೆಯೂಕಿನ ಗೌತಮ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಗಿಡ ನೆಡುವ, ವಿದ್ಯಾರ್ಥಿಗಳಿಗೆ ಉಚಿತ ನೋಟ್ಬುಕ್ ವಿತರಣೆ ಸಮಾರಂಭದಲ್ಲಿ ಮಾತನಾಡಿ, ದೇಶದ ಅಭಿವೃದ್ಧಿ, ಪರಿಸರ ಸಂರಕ್ಷಣೆ ಸೇರಿದಂತೆ ನಮ್ಮ ನಾಡಿನ ಸಂಸ್ಕೃತಿ, ಸಂಸ್ಕಾರಗಳನ್ನು ಉಳಿಸುವ ಸಂಪೂರ್ಣ ಹೊಣೆಗಾರಿಕೆ ದೇಶದ ಯವಜನಾಂಗದ ಮೇಲಿದೆ. ಯುವಜನಾಂಗವು ತಮ್ಮ ಜವಾಬ್ದಾರಿಯನ್ನು ಅರಿತು ಸದೃಢ ದೇಶ ನಿರ್ಮಾಣದ ಜೊತೆಯಲ್ಲಿ ಆರೋಗ್ಯಕರ ಪರಿಸರ ಸಂರಕ್ಷಣೆಗೆ ಮಹತ್ತರ ಕೊಡುಗೆ ನೀಡಬೇಕೆಂದರು. ಶಾಲಾ ಮುಖ್ಯೋಪಾಧ್ಯಾಯ ಗಂಗಚನ್ನಯ್ಯ, ಜಯಕರ್ನಾಟಕ ಅಧ್ಯಕ್ಷ ರಮೇಶ್, ಸಂಘದ ಅಧ್ಯಕ್ಷ ದೀಪು, ಗ್ರಾಪಂ ಸದಸ್ಯ ಲಕ್ಷ್ಮಣ,ಪದಾಧಿಕಾರಿಗಳಾದ ರಾಮು, ಕುಮಾರ್ ಇತರರು ಇದ್ದರು.