ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಪ್ರತಿಭಾ ಪುರಸ್ಕಾರ 20ಕ್ಕೆ

Rashmi Kasaragodu
Updated On : 5 Jul 2014, 12:37 pm

ತುರುವೇಕೆರೆ: ತಾಲ್ಲೂಕಿನ ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ತಾಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಜು.20 ರಂದು ಏರ್ಪಡಿಸಲಾಗಿದೆ. ಎಸ್ಸೆಸ್ಸೆಲ್ಸಿಯಲ್ಲಿ ಶೇ.70 ಅಂಕಗಳು, ದ್ವಿತೀಯ ಪಿಯುಸಿಯಲ್ಲಿ ಶೇ.60 ಕ್ಕಿಂತಲೂ ಹೆಚ್ಚಿಗೆ ಅಂಕ ಪಡೆದಿರುವ ಬ್ರಾಹ್ಮಣ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಗುವುದು. ವಿದ್ಯಾರ್ಥಿಗಳು ಜು.15ರೊಳಗೆ ಸೂಕ್ತ ದಾಖಲೆ ನೀಡಿ ತಮ್ಮ ಹೆಸರನ್ನು ನಮೂದಿಸಿಕೊಳ್ಳಬೇಕು ಎಂದು ಸಂಘದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ವಿವರಗಳಿಗೆ 9964396175, 9480664295, 9738928454 ಹಾಗೂ 9986484688 ಗೆ ಸಂಪರ್ಕಿಸಲು ಕೋರಲಾಗಿದೆ.
ಹಾಸ್ಟೆಲ್ಗೆ ಅರ್ಜಿ ಆಹ್ವಾನ
ತುರುವೇಕೆರೆ: ಪಟ್ಟಣದಲ್ಲಿರುವ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ 2014-15ನೇ ಸಾಲಿಗೆ ಸೇರ್ಪಡೆಗೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಮೆಟ್ರಿಕ್ ನಂತರದ ಕೋರ್ಸ್ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ವಿದ್ಯಾರ್ಥಿನಿಯರಿಗೆ ಉಚಿತ ಊಟ, ವಸತಿ ಮತ್ತು ಇತರೆ ಸೌಲಭ್ಯಗಳನ್ನು ನೀಡಲಾಗುವುದು. ಅರ್ಜಿ ನಮೂನೆ ಜೊತೆಯಲ್ಲಿ ಜಾತಿ ಮತ್ತು ಆದಾಯ ದೃಢೀಕರಣ ಪತ್ರ, ಎರಡು ಫೋಟೋ, ಹಿಂದಿನ ತರಗತಿಯ ಅಂಕಪಟ್ಟಿಯ ನಕಲು ಸಲ್ಲಿಸಬೇಕು. ನಿಗದಿತ ನಮೂನೆ ಅರ್ಜಿಗಳನ್ನು ತಾಲೂಕು ಹಿಂದುಳಿದ ವರ್ಗಗಳ ಕಚೇರಿ ಅಥವಾ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಜು.19ರೊಳಗೆ ಸಲ್ಲಿಸಬಹುದು.
ಸಾಕ್ಷರತಾ ರಥಕ್ಕೆ ಚಾಲನೆ
ತುರುವೇಕೆರೆ: ಬಹು ದಿನಗಳಿಂದ ನ್ಯಾಯಾಲಯದಲ್ಲಿ ಇರುವ ಬಾಕಿ ದಾವೆಗಳನ್ನು ಸಂಚಾರಿ ನ್ಯಾಯಾಲಯದ ಸಹಾಯ ಪಡೆದು ಪರಸ್ಪರ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಸಾರ್ವಜನಿಕರು ಮುಂದಾಗಬೇಕು ಎಂದು ನ್ಯಾಯಾಧೀಶ ಪುಟ್ಟಸ್ವಾಮಿ ಕರೆ ನೀಡಿದರು. ನ್ಯಾಯಾಲಯದ ಆವರಣದಲ್ಲಿ ಕಾನೂನು ಸಾಕ್ಷರತಾ ರಥವನ್ನು ತಾಲೂಕಿನ ವಿವಿಧ ಗ್ರಾಮಗಳಿಗೆ ಸಂಚರಿಸಲು ಹಸಿರು ನಿಶಾನೆ ತೋರಿದರು. ಸಾರ್ವಜನಿಕರಲ್ಲಿ ಕಾನೂನಿನ ಅರಿವು ಮೂಡಿಸುವುದು ರಥಯಾತ್ರೆಯ ಉದ್ದೇಶವಾಗಿದೆ ಎಂದರು. ತಾಲೂಕು ವಕೀಲರ ಸಂಘದ ಅಧ್ಯಕ್ಷ ದೇವರಾಜು, ಕಾರ್ಯದರ್ಶಿ ಪ್ರಸನ್ನ ಕುಮಾರ್, ತಾಪಂ ಇಒ ವಾಳ್ವೇಕರ್, ತಹಸೀಲ್ದಾರ್ ಮಾರೇಗೌಡ, ಸಿ ಡಿಪಿಒ ರವೀಂದ್ರ, ಸಿಪಿಐ ನಿರಂಜನ್ ಕುಮಾರ್, ಎಸ್ಐ ಸುರೇಶ್ ಮೊದಲಾದವರು ಭಾಗವಹಿಸಿದ್ದರು. ವಕೀಲರಾದ ಎಸ್.ಮುದ್ದೇಗೌಡ, ಎನ್.ಸಿ.ಜಗನ್ನಾಥ್ ದಂಡಿನವರ್, ಬಿ.ಆರ್.ಮಂಜುನಾಥ್, ಗಂಗರಂಗಯ್ಯ, ಟಿ.ಸಿ.ಶಂಕರ್, ಡಿ.ಪಿ.ನಂದೀಶ್, ನಿರಂಜನ್ ಮೂರ್ತಿ, ಪಿ.ಎಚ್.ಧನಪಾಲ್, ಟಿ.ಎಸ್.ಚನ್ನಕೇಶವಸ್ವಾಮಿ, ಬಿ.ಎನ್.ತಿಮ್ಮಪ್ಪ, ಎನ್.ಆರ್.ನಟರಾಜು, ಎಚ್.ಕೆ.ನಂಜೇಗೌಡ, ಎಚ್.ಎಸ್.ಸುದರ್ಶನ್, ಎಂ.ಡಿ.ನಟರಾಜು, ಕೆ.ಬಿ.ಶೇಖರ್, ಡಿ.ಟಿ.ರಾಜಶೇಖರಯ್ಯ, ಎಸ್.ಕೆ.ಉಮೇಶ್ ಹಲವಾರು ಗ್ರಾಮಗಳಿಗೆ ತೆರಳಿ ವಿವಿಧ ಕಾನೂನುಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement