ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಶಾಸಕರೇ ಕುರಾನ್ ಮೇಲೆ ಆಣೆ ಮಾಡಿ!

Rashmi Kasaragodu
Updated On : 5 Jul 2014, 12:29 pm

ತುಮಕೂರು: ಪಾಲಿಕೆಯ ಸ್ವಪಕ್ಷದ ಸದಸ್ಯರಿಂದಲೇ ಹಫ್ತಾ ವಸೂಲಿ ಆರೋಪಕ್ಕೆ ತುತ್ತಾಗಿರುವ ಶಾಸಕ ಡಾ. ರಫೀಕ್ ಅಹಮದ್ ತಾವು ಹಪ್ತಾ ವಸೂಲಿ ಮಾಡಿಲ್ಲವೆಂದು ಕುರಾನ್ ಮೇಲೆ ಆಣೆ ಮಾಡಿ ಹೇಳಲಿ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಸವಾಲು ಹಾಕಿದ್ದಾರೆ.
ಈಗ ಪವಿತ್ರ ರಂಜಾನ್ ಹಬ್ಬವಿದೆ. ನಿಮ್ಮ ಪಕ್ಷದ ಪಾಲಿಕೆ ಸದಸ್ಯರೇ ಹಪ್ತಾ ವಸೂಲಿ ಮಾಡ್ತಾ ಇದ್ದಾರೆ. ಈ ಬಗ್ಗೆ ಸಾರ್ವಜನಿಕವಾಗಿ ಉತ್ತರಿಸಿ ಎಂದು ಸವಾಲು ಹಾಕಿದ್ದಾರೆ.
ಈ ಹಿಂದೆ ತಾವು ಸೇರಿದಂತೆ ವಿರೋಧ ಪಕ್ಷದವರು ತಮ್ಮ ವಿರುದ್ಧ ಹಪ್ತಾ ವಸೂಲಿ ಮಾಡಿದಾಗ ಕೂಗಾಡಿದ ತಾವು ಈಗ ಏಕೆ ಮೌನವಾಗಿದ್ದೀರ ಎಂದು ಪ್ರಶ್ನಿಸಿದ್ದಾರೆ. ಸ್ವಪಕ್ಷದ ಸದಸ್ಯರೇ ಶಾಸಕರ ವಿರುದ್ಧ ಹಫ್ತಾ ವಸೂಲಿಯಂತ ಗಂಭೀರ ಆರೋಪ ಮಾಡಿದರೂ ರಫೀಕ್ ಅಹಮದ್ ಸುಮ್ಮನಿರುವುದು ನಾಚಿಕೆಗೇಡಿನ ಸಂಗತಿ ಎಂದಿದ್ದಾರೆ.
ವಿರೋಧ ಪಕ್ಷದವರು ಮಾಡಬೇಕಾದ ಆರೋಪವನ್ನು ಸ್ವಪಕ್ಷದವರೇ ಮಾಡಿರುವುದರಿಂದ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಶಿವಣ್ಣ ತಿಳಿಸಿದರು. ಸಾರ್ವಜನಿಕವಾಗಿ ಸ್ಥಳೀಯ ಶಾಸಕರ ವಿರುದ್ಧ ಹಪ್ತಾ ವಸೂಲಿ ಆರೋಪ ಬಂದ ಕೂಡಲೇ ಶಾಸಕರು ಬಹಿರಂಗವಾಗಿ ಕ್ಷಮಾಪಣೆ ಕೇಳುತ್ತಾರೆ ಎಂದು ನಿರೀಕ್ಷಿಸಿದ್ದೆವು. ಆದರೆ ಆ ಬಗ್ಗೆ ಚಕಾರವೆತ್ತದೇ ಇರುವುದನ್ನು ನೋಡಿದರೆ ಹಪ್ತಾ ವಸೂಲಿ ಮಾಡುತ್ತಿರುವುದು ನಿಜ ಎಂದು ಒಪ್ಪಿಕೊಂಡಂತಾಗಿದೆ. ನಗರಪಾಲಿಕೆ ಹಣವನ್ನು ಶಾಸಕರು ಕೇವಲ ಒಂದು ಕೋಮಿನವರಿಗೆ ನೀಡುತ್ತಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಆರೋಪಿಸಿದರು.
ನಗರಪಾಲಿಕೆ ಆಯುಕ್ತರು ಸೇರಿದಂತೆ ಬಹುತೇಕ ಅಧಿಕಾರಿಗಳನ್ನು ಸ್ಥಳೀಯ ಶಾಸಕರು ವಸೂಲಿ ಬಾಜಿಗೆ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ ಶಿವಣ್ಣ ನಗರಪಾಲಿಕೆಗೆ ಐಎಎಸ್ ಗ್ರೇಡ್ ಅಧಿಕಾರಿಯನ್ನು ನೇಮಿಸುವಂತೆ ಒತ್ತಾಯಿಸಿದರು.
ಮೇಲ್ಸೇತುವೆಗೂ ಹಪ್ತಾ: ಕೋಡಿಬಸವೇಶ್ವರ ಸ್ವಾಮಿ ದೇವಸ್ಥಾನದ ಬಳಿ ನಿರ್ಮಿಸಲು ಉದ್ದೇಶಿಸಿರುವ ಮೇಲ್ಸೇತುವೆ ಕಾಮಗಾರಿ ಆರಂಭವಾಗದೇ ಇರುವುದಕ್ಕೆ ಮುಖ್ಯ ಕಾರಣ ಇನ್ನು ಹಫ್ತಾ ವಸೂಲಿ ಆಗದೇ ಇರುವುದು ಕಾರಣ ಎಂದು ಸೊಗಡು ವ್ಯಂಗ್ಯವಾಡಿದರು.
ಘಟಕ ನಿರ್ಮಾಣವಾಗಲಿ: ಅಜ್ಜಗೊಂಡನಹಳ್ಳಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸುವುದು ಸರಿ ಎಂದ ಅವರು ವೈಜ್ಞಾನಿಕ ರೀತಿಯಲ್ಲಿ ಘಟಕ ನಿರ್ಮಿಸಲಿ. ಅಲ್ಲದೇ ರೈತರಿಗೆ ಸಮರ್ಪಕ ಪರಿಹಾರ ನೀಡುವಂತೆ ಇದೇ ಸಂದರ್ಭದಲ್ಲಿ ತಿಳಿಸಿದರು.
ಅಜ್ಜಗೊಂಡನಹಳ್ಳಿಯಲ್ಲಿ ಘಟಕ ಸ್ಥಾಪಿಸುವಂತೆ ಕೋರ್ಟ್ ಆದೇಶವಿದೆ. ಹೀಗಾಗಿ ಘಟಕ ನಿರ್ಮಿಸಲು ಯಾವುದೇ ತೊಂದರೆಯಿಲ್ಲ. ಪರಮೇಶ್ವರ್ ಈ ಬಗ್ಗೆ ಅಪಸ್ವರ ಎತ್ತುವುದು ಸರಿಯಲ್ಲ ಎಂದಿದ್ದಾರೆ. ಗೋಷ್ಠಿಯಲ್ಲಿ ಶಿವಪ್ರಸಾದ್, ಸ್ನೇಕ್ ನಂದೀಶ್, ಲಕ್ಷ್ಮೀಶ್, ಕುಬೇರ್ ನಾಗಭೂಷಣ್, ಬನಶಂಕರಿ ಬಾಬು, ಉಮೇಶ್, ವಿಶ್ವನಾಥ್, ರವಿಶಂಕರ್, ಗಿರಿಜಮ್ಮ, ಗೀತಾ, ಚಂದ್ರಶೇಖರ್ ಸೇರಿದಂತೆ ಮತ್ತಿರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement