ಸೂಚನಾ ಸಭೆ
ತಿಪಟೂರು: ಪಟ್ಟಣದ ಶ್ರೀ ಕಲ್ಲೇಶ್ವರ ಸ್ವಾಮಿ ದೇವಾಲಯದ ಜೀರ್ಣೋದ್ಧಾರಕ್ಕಾಗಿ ಅಗತ್ಯ ಸಲಹೆ ಸೂಚನೆಗಳನ್ನು ಸಾರ್ವಜನಿಕರಿಂದ ಪಡೆಯಲು ಜು. 6ರ ಭಾನುವಾರ ಬೆಳಿಗ್ಗೆ 11ಗಂಟೆಗೆ ಶಾಸಕ ಕೆ. ಷಡಕ್ಷರಿ ಅವರ ಅಧ್ಯಕ್ಷತೆಯಲ್ಲಿ ಸಭೆಯನ್ನು ದೇವಾಲಯದ ಅವರಣದಲ್ಲಿ ಕರೆಯಲಾಗಿದೆ. ಆದ್ದರಿಂದ ಪಟ್ಟಣ ಹಾಗೂ ತಾಲ್ಲೂಕಿನ ಸಾರ್ವಜನಿಕರು ಮತ್ತು ಭಕ್ತಾದಿಗಳು ಸಭೆಗೆ ಹಾಜರಾಗಿ ತಮ್ಮ ಅಮೂಲ್ಯ ಸಲಹೆಗಳನ್ನು ನೀಡಬೇಕೆಂದು ತಹಸೀಲ್ದಾರ್ ತಿಳಿಸಿದ್ದಾರೆ.
ಮದ್ಯದಂಗಡಿಗೆ ಒತ್ತಾಯ
ಹುಳಿಯಾರು: ಪಟ್ಟಣದಲ್ಲಿ ಆರು ಮದ್ಯದ ಅಂಗಡಿಗಳಲ್ಲಿ ನಿತ್ಯ ನಾಲ್ಕರಿಂದ ಐದು ಲಕ್ಷ ಮದ್ಯ ಮಾರಾಟವಾಗುತ್ತಿದ್ದು, ತಿಂಗಳಿಗೆ ಒಂದೂವರೆ ಕೋಟಿ ವಹಿವಾಟು ನಡೆಯುತ್ತಿದೆ. ಲಕ್ಷಾಂತರ ರುಪಾಯಿ ಆದಾಯವಿರುವ ಮದ್ಯದ ಅಂಗಡಿ ಖಾಸಗಿಯವರಿಗೆ ನೀಡುವ ಬದಲಿಗೆ ಸರ್ಕಾರಿ ಸ್ವಾಮ್ಯದ ಎಂಎಸೈಎಲ್ (ಂಖಐಔ)ಗೆ ನೀಡುವಂತೆ ತಾಪಂ ಮಾಜಿ ಅಧ್ಯಕ್ಷ ಕೆಂಕೆರೆನವೀನ್ ಒತ್ತಾಯಿಸಿದ್ದಾರೆ. ಹುಳಿಯಾರಿನಲ್ಲಿ ನಕಲಿ ಮದ್ಯದ ಹಾವಳಿ ಹೆಚ್ಚುತ್ತಿದ್ದು, ಪಾನಪ್ರಿಯರಿಗೆ ಉತ್ತಮ ಮದ್ಯ ದೊರೆಯದೆ ಜೀವಕ್ಕೆ ಹಾನಿ ತಂದುಕೊಳ್ಳುತ್ತಿದ್ದಾರೆ. ಎಂಎಸೈಎಲ್ ಮದ್ಯದಂಗಡಿ ತೆರೆಯುವುದರಿಂದ ಸರ್ಕಾರಕ್ಕೆ ಹೆಚ್ಚಿನ ಆದಾಯ ಬರುವುದಲ್ಲದೆ ನಕಲಿ ಮದ್ಯದ ಹಾವಳಿ ನಿಲ್ಲಿಸಿದಂತಾಗುತ್ತದೆ ಎಂದರು.
ಮರ ಉರುಳಿ ಬಿದ್ದು ಕರು ಸಾವು
ಕುಣಿಗಲ್: ತಾಲೂಕಿನ ಕಲ್ಲನಾಯ್ಕನಹಳ್ಳಿ ಗ್ರಾಮದ ಹನುಮಂತರಾಯ ಸ್ವಾಮಿ ದೇವಾಲಯದ ಮುಂಭಾಗದಲ್ಲಿದ್ದ ಪುರಾತನ ಅರಳಿ ಮರ ಉರುಳಿ ಬಿದ್ದ ಪರಿಣಾಮ ಮನೆ, ದೇವಾಲಯ ಜಖಂಗೊಂಡು ಕರುವೊಂದು ಮೃತಪಟ್ಟಿದೆ. ಗುರುವಾರ ರಾತ್ರಿ ಬೃಹತ್ ಶಬ್ದದೊಂದಿಗೆ ಅರಳಿಮರ ಉರುಳಿ ಬೀಳುವಾಗ ಮನೆಯಲ್ಲಿ ಮಲಗಿದ್ದ ಜನರು ಹೊರಗೆ ಓಡಿ ಬಂದು ಮರದ ಕೆಳಗೆ ಕಟ್ಟಿದ್ದ ರಾಸುಗಳನ್ನು ತೆರವುಗೊಳಿಸುವಾಗ ಎಮ್ಮೆ ಕರು ಮರದ ಕೆಳಗೆ ಸಿಕ್ಕಿ ಮೃತಪಟ್ಟಿದೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.