10 ಸಾವಿರ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣೆ
ತುಮಕೂರು: ಇಲ್ಲಿನ ಸಿದ್ದಗಂಗಾ ಮಠದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ನೂರರಷ್ಟು ಫಲಿತಾಂಶ ಪಡೆದು ಹೆಚ್ಚಿನ ಗೌರವ ತರಬೇಕು ಎಂದು ಪೈ ಅಂತಾರಾಷ್ಟ್ರೀಯ ಕಂಪನಿ ನಿರ್ದೇಶಕ ರಾಜಕುಮಾರ್ ಪೈ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಅವರು ಸಿದ್ದಗಂಗಾ ಮಠದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 10 ಲಕ್ಷ ಬೆಲೆ ಬಾಳುವ 67 ಸಾವಿರ ನೋಟ್ ಪುಸ್ತಕಗಳನ್ನು 10 ಸಾವಿರ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಣೆ ಮಾಡಿ ಮಾತನಾಡಿದರು. ನಮ್ಮ ಪೈ ಕಂಪನಿ ವತಿಯಿಂದ ಶ್ರೀಗಳ ಮಠದ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲೂ ನಿರಂತರವಾಗಿ ಉಚಿತ ನೋಟ್ ಪುಸ್ತಕಗಳನ್ನು ವಿತರಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಡಾ. ಶಿವಕುಮಾರ ಸ್ವಾಮೀಜಿ, ಗಂಗಾಧರ್ ಪೈ, ಪೈ ಕಂಪನಿಯ ಹಣಕಾಸು ಆಡಳಿತಾಧಿಕಾರಿ ಮೀನ ರಾಜ್ಕುಮಾರ್ ಪೈ, ಅಜಿತ್ ಕುಮಾರ್ ಪೈ, ಗುರುಪ್ರಸಾದ್ ಪೈ, ಉತ್ತಮ್ಕುಮಾರ್ ಪೈ, ದಾಮೋದರ್ ಪೈ, ಪೈ ಕಂಪನಿಯ ಸಿಬ್ಬಂದಿ ವರ್ಗದವರು, ಶ್ರೀ ಸಿದ್ದಗಂಗಾ ಮಠದ ಶಿಕ್ಷಕರು, ಆಡಳಿತಾಧಿಕಾರಿಗಳು ಭಾಗವಹಿಸಿದ್ದರು.