ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ನಾನಾ ಬೇಡಿಕೆಗಳ ಈಡೇರಿಕೆಗೆ ಪ್ರತಿಭಟನೆ

Rashmi Kasaragodu
Updated On : 6 Jul 2014, 12:35 pm

ತುಮಕೂರು: ತುಮಕೂರು ಶಾಲಾ ಕಾಲೇಜುಗಳ ನೌಕರರ ಒಕ್ಕೂಟದ ವತಿಯಿಂದ ಅನುದಾನ ಸಹಿತ ಶಿಕ್ಷಣ ಸಂಸ್ಥೆಗಳ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಗರದ ಟೌನ್ಹಾಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಅನುದಾನ ರಹಿತ ಸೇವಾ ಅವಧಿಯನ್ನು ವೇತನ ಬಡ್ತಿ, ಪದೋನ್ನತಿ ಮತ್ತು ಪಿಂಚಣಿಗೆ ಅನುವು ಮಾಡಿಕೊಡುವುದು. ಸೇವೆಗೆ ಸೇರಿದ ದಿನಾಂಕದಿಂದಲೇ ಎಲ್ಲಾ ನೌಕರರ ಸೇವೆಯನ್ನು ಮಾನ್ಯ ಮಾಡಿ ಅನುದಾನ ಸಹಿತವಾಗಿ ಪರಿಗಣಿಸುವುದು ಸೇರಿದಂತೆ ಕೆಲವು ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ಕೂಡಲೇ ಪರಿಗಣಿಸುವಂತೆ ಲಾ ಕಾಲೇಜುಗಳ ನೌಕರರ ಒಕ್ಕೂಟವು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಸರ್ಕಾರ ನೌಕರರ ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸುವ ಸಲುವಾಗಿ ಸರ್ಕಾರದ ಹಂತದಲ್ಲಿ ಚರ್ಚಿಸಿ ನೌಕರರಿಗೆ ಅನುಕೂಲ ಕಲ್ಪಿಸಿಕೊಡುವಂತೆ ಶಾಲಾ ಕಾಲೇಜುಗಳ ನೌಕರರ ಒಕ್ಕೂಟ ಮನವಿ ಮಾಡಿದೆ. ಪ್ರತಿಭಟನೆಯಲ್ಲಿ ಹನುಮಂತರಾಯಪ್ಪ, ಮಂಜುನಾಥ್, ಚಿಕ್ಕಣ್ಣ, ಬಸವರಾಜು ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement