ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಹುಟ್ಟುಹಬ್ಬಕ್ಕಿಂತಲೂ ಸಾಧನೆ ಮುಖ್ಯ

Rashmi Kasaragodu
Updated On : 6 Jul 2014, 12:35 pm

ಕೊರಟಗೆರೆ: ಹುಟ್ಟುಹಬ್ಬದ ಆಚರಣೆ ನಮ್ಮ ಸಂಸ್ಕೃತಿಯಲ್ಲದಿದ್ದರೂ ಇಂದಿನ ವಿದ್ಯಮಾನದಲ್ಲಿ ಅದ್ಧೂರಿ ಹುಟ್ಟುಹಬ್ಬದ ಆಚರಣೆ ನಡೆಯುತ್ತಿದೆ ಎಂದು ಪ್ರಾಂಶುಪಾಲ ಸಿ. ಹನುಮಂತ ರೆಡ್ಡಿ ತಿಳಿಸಿದರು. ಅವರು ಪಟ್ಟಣದ ಜೆ.ಕೆ. ಮೆಮೋರಿಯಲ್ ಶಾಲೆಯಲ್ಲಿ ತಮ್ಮ ಹುಟ್ಟುಹಬ್ಬದ ಆಚರಣೆಯಲ್ಲಿ ಕೇಕ್ ಕತ್ತರಿಸುವ ಮೂಲಕ ಉದ್ಘಾಟಿಸಿ, ನಮ್ಮದು ದೀಪ ಹಚ್ಚುವಂತಹ ಸಂಸ್ಕೃತಿ ಆದರೆ ಇಂದು ದೀಪ ಆರಿಸುವಂತಹ ಸಂಸ್ಕೃತಿಗೆ ಮಾರುಹೋಗುತ್ತಿದ್ದೇವೆ. ಇದು ನಿಲ್ಲುವಂತಾಗಬೇಕು ಎಂದು ಹೇಳಿದರು. ಪ್ರತಿ ಹುಟ್ಟುಹಬ್ಬದ ಆಚರಣೆಯಂದು ಮಕ್ಕಳು ನಾನು ನನ್ನ ಜೀವನದಲ್ಲಿ ಒಂದು ಹೆಚ್ಚಿನ ವರ್ಷವನ್ನು ಮುಗಿಸಿದ್ದೇನೆ. ಈ ಅವಧಿಯಲ್ಲಿ ನಾನು ಯಾವ-ಯಾವ ಸಾಧನೆಯನ್ನು ಮಾಡಿದ್ದೇನೆ. ಎಷ್ಟರ ಮಟ್ಟಿಗೆ ಅದು ಫಲ ನೀಡಿದೆ. ಮುಂದಿನ ಹುಟ್ಟಿದ ಹಬ್ಬದ ಒತ್ತಿಗೆ ಈ ಸಾಧನೆಗಳನ್ನು ನಾನು ಮಾಡಬೇಕು ಎಂಬೆಲ್ಲ ಧ್ಯೇಯಗಳೊಂದಿಗೆ ಹುಟ್ಟಿದ ಹಬ್ಬವನ್ನು ಆಚರಿಸಿಕೊಂಡು ಬರಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲೆ ಆದಿಲಕ್ಷ್ಮಿ ಶಿಕ್ಷಕರಾದ ಚನ್ನಕೇಶವ, ಸಿದ್ದರಾಜು, ದಿವ್ಯ, ವಸುಂಧರಾ, ಮಮತಾಜ್, ಶಮೀನಾ ಖಾನಂ, ಮಂಜುಳಾ ಸೇರಿದಂತೆ ಇತರರು ಶಿಕ್ಷಕರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement