ಅಧಿಕಾರಿಗೆ ನೊಟೀಸ್
ಶಿರಾ: ತಾಲೂಕಿನ ಗೌಡಗೆರೆ ಹೋಬಳಿ ವ್ಯಾಪ್ತಿಯ ತಾವರೆಕರೆ ರೈತ ಸಂಪರ್ಕ ಕೇಂದ್ರದಲ್ಲಿ ಅಧಿಕಾರಿಯೊಬ್ಬರು ರೈತರಿಂದ ಹಣ ಪಡೆದು ರಸೀದಿ ನೀಡದೆ ಇರುವ ಬಗ್ಗೆ ಸದರಿ ಅಧಿಕಾರಿಗೆ ಕೃಷಿ ಇಲಾಖೆ ನೋಟೀಸ್ ಜಾರಿಗೊಳಿಸಿದೆ.
ಸೂರ್ಯಕಾಂತಿ ಬೆಳೆ ಪ್ರಾತ್ಯಕ್ಷಿಕೆಗೆಂದು ಗೊಬ್ಬರ ಔಷಧಿ ವಿತರಿಸಿ ರೈತರಿಂದ ತಲಾ ರು. 70 ಹಣ ಪಡೆದಿದ್ದರ ಕುರಿತು ರೈತರು ಆರೋಪಿಸಿದ್ದರು. ಈ ಬಗ್ಗೆ ಪರಿಶೀಲಿಸಿದ ಇಲಾಖೆ ಮೂರು ದಿನಗಳ ಒಳಗೆ ಸೂಕ್ತ ದಾಖಲಾತಿಗಳೊಂದಿಗೆ ಲಿಖಿತ ಉತ್ತರ ನೀಡಬೇಕು ಎಂದು ಪ್ರಭಾರಿ ಕೃಷಿ ಅಧಿಕಾರಿ ಸುರೇಶ್ ನಾರಾಯಣ ನಲ್ಲೂರು ಅವರಿಗೆ ತಿಳಿಸಲಾಗಿದೆ.