ತುಮಕೂರು: ಮಂಚಕಲ್ ಕುಪ್ಪೆಯ ಎಚ್ಎಂಎಸ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಜು. 9ರ ಬುಧವಾರ ಬೆಳಗ್ಗೆ 8.30 ಕ್ಕೆ ಉದ್ಯೋಗ ಮೇಳ ಆಯೋಜಿಸಲಾಗಿದೆ. ಈ ಮೇಳದಲ್ಲಿ ಬಿಇ, ಬಿಟೆಕ್, ಬಿಎಸ್ಸಿ ಕಂಪ್ಯೂಟರ್, ಬಿಸಿಎ ವಿದ್ಯಾರ್ಥಿಗಳು ಭಾಗವಹಿಸಬಹುದು. ವಿವರಗಳಿಗೆ ಟಿ.ಎಸ್. ರಮೇಶ್ ದೂ-9900570991 ಸಂಪರ್ಕಿಸಿ.
ಅಧಿಕಾರ ಸ್ವೀಕಾರ
ಮೇಲುಕೋಟೆ: ಶ್ರೀ ಚೆಲುವನಾರಾಯಣಸ್ವಾಮಿ ಮತ್ತು ಶ್ರೀಯೋಗನರಸಿಂಹಸ್ವಾವು ದೇವಾಲಯಗಳ ನೂತನ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಪಾಂಡವಪುರ ತಹಸೀಲ್ದಾರ್ ಶಿವಕುಮಾರಸ್ವಾಮಿ ಅಧಿಕಾರ ವಹಿಸಿಕೊಂಡಿದ್ದಾರೆ.