ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕರಡಾಳು ರೈತ ಸಾವು: ಪರಿಹಾರಕ್ಕೆ ಒತ್ತಾಯ

Rashmi Kasaragodu
Updated On : 8 Jul 2014, 2:01 am

ತುಮಕೂರು: ತಿಪಟೂರು ತಾಲೂಕು ಕರಡಾಳು ಸಂತೆಯಲ್ಲಿ ನಡೆದ ಕಿರಣ್ ಕುಮಾರ್ ಸಾವಿಗೆ ಸಂಬಂಧಿಸಿದಂತೆ ಈವರೆಗೆ ಪರಿಹಾರ ನೀಡಿಲ್ಲವೆಂದು ಮೃತ ವ್ಯಕ್ತಿ ತಾಯಿ ಮತ್ತು ಸಹೋದರ ದೂರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟನೆ ನಡೆದು 20 ದಿನಗಳು ಕಳೆದರೂ ಸರಕಾರದ ಯಾವುದೇ ಜನಪ್ರತಿನಿಧಿ ಕುಟುಂಬದ ಸದಸ್ಯರನ್ನು ಭೇಟಿ ಮಾಡಿಲ್ಲ. ಅಲ್ಲದೆ ಪೊಲೀಸರು ನನ್ನ ತಮ್ಮನ ಸಾವಿಗೆ ಏನು ಕಾರಣ ಎಂದು ದೃಢೀಕರಿಸುವ ಮರಣೋತ್ತರ ಪರೀಕ್ಷೆಯ ವರದಿಯನ್ನು ನೀಡಿಲ್ಲ. ನಮ್ಮನ್ನು ಕತ್ತಲೆಯಲ್ಲಿಟ್ಟು ಯಾವುದೇ ಪರಿಹಾರ ದೊರೆಯದಂತೆ ಮಾಡಿದ್ದಾರೆ ಎಂದು ದೂರಿದರು.
ಕರಡಾಳು ಸಂತೆ ರೈತ ಸಾವಿಗೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಶಾಸಕರು ಮತ್ತು ಗೃಹ ಸಚಿವರು ರೈತಸಂಜೀವಿನಿ ಯೋಜನೆಯಡಿ ಪರಿಹಾರ ವಿತರಿಸಿರುವುದಾಗಿ ಹೇಳಿಕೆ ನೀಡಿದ್ದಾರೆ. ಆದರೆ, ಇದುವರೆಗೂ ಒಂದು ನೈಯಾ ಪೈಸೆ ದೊರೆತಿಲ್ಲ. ಶಾಸಕ ಕೆ.ಷಡಕ್ಷರಿ ಅವರು ನನ್ನ ತಮ್ಮನ ಮಣ್ಣಿನ ದಿನ 10 ಸಾವಿರ ನೀಡಿದ್ದನ್ನು ಬಿಟ್ಟರೆ ಸರಕಾರದಿಂದ ಯಾವುದೇ ಪರಿಹಾರ ದೊರೆತಿಲ್ಲ. ತನಿಖೆಗೆಂದು ಬಂದ ಡಿಜಿಪಿಯವರು ಕೂಡ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಮಾಹಿತಿ ಪಡೆದಿಲ್ಲ. ಇಡೀ ತನಿಖೆಯನ್ನು ಏಕಪಕ್ಷೀಯವಾಗಿ ನಡೆದಿದೆ ಎಂದು ನವೀನ್ ಕುಮಾರ್ ಅಪಾದಿಸಿದರು. ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೂ ಇದೇ ವೇಳೆ ದೂರು ಸಲ್ಲಿಸಲಾಗಿದೆ ಎಂದು ನವೀನಕುಮಾರ್ ನುಡಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement