ಟ್ರ್ಯಾಕ್ಟರ್ ಮಾಲೀಕರ ಸಂಘ ಅಸ್ತಿತ್ವಕ್ಕೆ
ಪಾವಗಡ: ತಾಲೂಕಿನಲ್ಲಿ ಟ್ರಾಕ್ಟರ್ ಮಾಲೀಕರ ಸಂಘ ಅಸ್ತಿತ್ವಕ್ಕೆ ಬಂದಿದ್ದು, ಸಂಘದ ಅಧ್ಯಕ್ಷರಾಗಿ ಕಡಮಲಕುಂಟೆ ಕೆ.ಎ.ನಾಗಭೂಷಣ್ ಅವರನ್ನು ಆಯ್ಕೆ ಮಾಡಲಾಗಿದೆ. ಉಪಾಧ್ಯಕ್ಷರಾಗಿ ಆರ್.ಕೆ.ಅಂಜನ್, ಕಾರ್ಯದರ್ಶಿಯಾಗಿ ದೇವರಾಜ್, ಖಜಾಂಚಿಯಾಗಿ ಎಸ್.ಹನುಮಂತರಾಯಪ್ಪ ಆಯ್ಕೆಯಾದರೆ, ಉಳಿದ 15 ಜನರ ಸಂಘದ ನಿರ್ದೇಶಕರಾಗಿದ್ದಾರೆ. ಯಾವುದೇ ಗೊಂದಲಗಳಿಗೆ ಅವಕಾಶ ನೀಡಿದೆ ಶಾಂತಿ ರೀತಿಯ ಪದಾಧಿಕಾರಿಗಳ ಆಯ್ಕೆಗೆ ಸಹಕರಿಸಿದ ಸಂಘದ ಎಲ್ಲಾ ನಿರ್ದೇಶಕರಿಗೆ ಅಧ್ಯಕ್ಷ ನಾಗಭೂಷಣ್ ಕೃತಜ್ಞತೆ ಸಲ್ಲಿಸಿದ್ದಾರೆ.