ರುಕ್ಮಿಣಿ ಪಾಂಡುರಂಗ ಸ್ವಾಮಿಗೆ ಏಕಾದಶಿ ಉತ್ಸವ ಇಂದು, ನಾಳೆ
ಕೊರಟಗೆರೆ: ಪಟ್ಟಣದ ಶ್ರೀ ವಿಠಲ ರುಖುಮಾಯಿ ಔದಾರ್ಯ ಸಂಸ್ಥೆ ವತಿಯಿಂದ ಜು.8 ಮತ್ತು 9 ರಂದು ಪಾಂಡುರಂಗ ದೇವಾಲಯದಲ್ಲಿ ರುಕ್ಮಿಣಿ ಪಾಂಡುರಂಗ ಸ್ವಾಮಿಗೆ ಏಕಾದಶಿ ಉತ್ಸವ, ಪ್ರತಿಭಾ ಪುರಸ್ಕಾರ ಮತ್ತು ಹೆಣ್ಣು ಮಕ್ಕಳಿಗೆ ಮಡಿಲಕ್ಕಿ ಏರ್ಪಡಿಸಲಾಗಿದೆ.
ಜು.9 ರಂದು ಮದ್ಯಾಹ್ನ 2013-14 ನೇ ಸಾಲಿನಲ್ಲಿ ಎಸ್ಎಸ್ಎಲ್ಸಿ, ಪಿಯುಸಿ ಮತ್ತು ಉನ್ನತ ವಿದ್ಯಾಭ್ಯಾಸಲ್ಲಿ ಅತಿ ಹೆಚ್ಚು ಅಂಕ ಪಡೆದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು ನೋಟ್ ಪುಸ್ತಕಗಳ ವಿತರಣಾ ಕಾರ್ಯಕ್ರಮ ಮತ್ತು ಕೊರಟಗೆರೆ ಭಾವಸಾರ ಕ್ಷತ್ರಿಯದ 2013-14 ನೇ ಸಾಲಿನಲ್ಲಿ ಮದುವೆಯಾದ ಎಲ್ಲಾ ಹೆಣ್ಣು ಮಕ್ಕಳಿಗೆ ಮಹಿಳಾ ಮಂಡಳಿಯಿಂದ ಮಡಿಲಕ್ಕಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸಂಜೆ ರುಕ್ಮಿಣಿ ಪಾಂಡುರಂಗ ಸ್ವಾಮಿಯನ್ನು ವಿದ್ಯುದ್ದೀಪಾಲಂಕಾರದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಪಟ್ಟಣದ ರಾಜ ಬೀದಿಯಲ್ಲಿ ಉತ್ಸವ ನಡೆಸಲಾಗುವುದು.
ಪ್ರತಿಭಾ ಪುರಸ್ಕಾರ ಮತ್ತು ಹೆಣ್ಣು ಮಕ್ಕಳಿಗೆ ಮಡಿಲಕ್ಕಿ ಕಾರ್ಯಕ್ರಮದಲ್ಲಿ ಬೆಂಗಳೂರಿನ ಉದ್ಯಮಿಗಳು ಹಾಗೂ ಭಾವಸಾರ ಕ್ಷತ್ರಿಯ ಮುಂಖಡರಾದ ಕೆ,ವಿ. ಚಂದ್ರಮೋಹನ್, ಕೆ.ಎನ್. ನಾರಾಯಣರಾವ್, ಬಿ.ಕೆ.ನಾಗರಾಜರಾವ್, ದಯಾಶಂಕರ್ರಾವ್, ಪರಶುರಾಮರಾವ್ ಸೇರಿದಂತೆ ಇನ್ನಿತರರು ಭಾಗವಹಿಸುವರು.