ಕಾನೂನಿಗೆ ಸಮಾಜ ನಿರ್ಮಾಣ ಶಕ್ತಿ
ಗುಬ್ಬಿ: ಸಂಪ್ರದಾಯಬದ್ಧ ಕಟ್ಟುಪಾಡುಗಳಂತೆ ಕಾನೂನು ಕೂಡ ಶಾಂತಿ ಸಮಾಜ ನಿರ್ಮಾಣ ಮಾಡುವ ಶಕ್ತಿ ಹೊಂದಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎನ್.ನರಸಮ್ಮ ತಿಳಿಸಿದರು.
ಗುಬ್ಬಿ ತಾಲೂಕಿನ ಕಡಬ ಹೋಬಳಿ ಕೆ.ಮತ್ತಿಘಟ್ಟ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾನೂನು ಸಾಕ್ಷರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬದುಕಿನಲ್ಲಿ ಆರೋಗ್ಯಕರ ಚಟುವಟಿಕೆ ಸೂಚಿಸುವ ಕಾನೂನು ಮಾನವ ನಡವಳಿಕೆಯಂತೆ ರಚನೆಯಾಗಿದೆ ಎಂದರು. ಪ್ರಾಚಾರ್ಯ ಎಚ್.ಕೆ.ನರಸಿಂಹಮೂರ್ತಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಕಾನೂನು ಅರಿಯದ ಮುಗ್ಧರ ಸಂಖ್ಯೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಂದ ಕಾನೂನು ಅರಿವು ಮೂಡಿಸುವ ಕಾರ್ಯ ಅಗತ್ಯವಿದೆ ಎಂದರು.
ಸಿವಿಲ್ ನ್ಯಾಯಾಧೀಶರಾದ ಎಚ್.ಕೆ.ಉಮೇಶ್, ಎನ್.ಮಹದೇವಪ್ಪ, ಬಿಇಒ ಪಿ.ಬಿ.ಬಸವರಾಜು, ಸಿಡಿಪಿಒ ಹೊನ್ನೇಶಪ್ಪ, ವಕೀಲರ ಸಂಘದ ಅಧ್ಯಕ್ಷ ಷಡಕ್ಷರಿ, ಕಾರ್ಯದರ್ಶಿ ಮೋಹನ್, ವಕೀಲ ಬಿ.ಬಾಲಾಜಿ ಇತರರು ಇದ್ದರು.