ಪ್ರವಚನ ಸಪ್ತಾಹ ಉದ್ಘಾಟನೆ ಇಂದು
ತಿಪಟೂರು: ಸಂಸ್ಕಾರ ಭಾರತೀ, ಗಮಕ ಕಲಾ ಅಭಿಮಾನಿಗಳ ಬಳಗದ ವತಿಯಿಂದ ಚಂದನ ದೂರದರ್ಶನ ವಾಹಿನಿಯ ಸತ್ಯ ದರ್ಶನ ಖ್ಯಾತಿಯ ಡಾ.ಪಾವಗಡ ಪ್ರಕಾಶರಾವ್ ಅವರಿಂದ ಶ್ರೀಮದ್ ವಾಲ್ಮೀಕಿ ರಾಮಾಯಣ ಪ್ರವಚನ ಸಪ್ತಾಹವನ್ನು ಪಟ್ಟಣದ ಎಂ.ವಿ.ಸೀತಾರಾಮಯ್ಯ ಶತಮಾನೋತ್ಸವ ಭವನದಲ್ಲಿ ಜು.9ರಿಂದ ಜು.15ರವರೆಗೆ ಪ್ರತಿದಿನ ಸಂಜೆ 6ರಿಂದ 8ಗಂಟೆವರೆಗೆ ಆಯೋಜಿಸಲಾಗಿದೆ ಎಂದು ಸಂಸ್ಕಾರ ಭಾರತೀಯ ಪ್ರಸಾದಿ ತಿಳಿಸಿದ್ದಾರೆ. ಪ್ರವಚನ ಸಪ್ತಾಹದ ಉದ್ಘಾಟನೆ ನಡೆಯಲಿದ್ದು, ಸಾನಿಧ್ಯವನ್ನು ಷಡಕ್ಷರ ಮಠದ ರುದ್ರಮುನಿ ಸ್ವಾಮೀಜಿ ವಹಿಸಲಿದ್ದಾರೆ. ಅಧ್ಯಕ್ಷತೆ ಗಮಕ ಕಲಾ ಅಭಿಮಾನಿ ಬಳಗದ ಸದಸ್ಯರಾದ ವಿ.ಸಿ. ರಾಮಕೃಷ್ಣ ವಹಿಸಲಿದ್ದಾರೆ.
ಗುರುಪೂರ್ಣಿಮಾ ಮಹೋತ್ಸವ ಇಂದಿನಿಂದ
ತಿಪಟೂರು: ಪಟ್ಟಣದ ರಾಮಮಂದಿರ ರಸ್ತೆಯಲ್ಲಿರುವ ರಾಮಮಂದಿರಲ್ಲಿ ಶೃಂಗೇರಿ ಜಗದ್ಗುರು ಭಾರತೀ ತೀರ್ಥ ಸ್ವಾಮಿಗಳ ಕೃಪಾಶೀರ್ವಾದದೊಂದಿಗೆ ಶ್ರೀ ಬಿಂಧುಮಾಧವಶರ್ಮ ಸ್ವಾಮೀಜಿಯವರ ಪೂರ್ಣಾನುಗ್ರಹ ಹಾಗೂ ಕೃಷ್ಣಮೂರ್ತಿ ದಾಸರ ಪ್ರೇರಣಾನುಸಾರ ಹನ್ನೊಂದನೇ ವರ್ಷದ ಗುರುಪೂರ್ಣಿಮಾ ಮಹೋತ್ಸವ ಜು.9ರಿಂದ ಜು.12ರವರೆಗೆ ಏರ್ಪಡಿಸಲಾಗಿದೆ.
ಇಂದು ಸದ್ಗುರು ಪಾದುಕಾಭಿಷೇಕ, ಮಹಾಮಂಗಳಾರತಿ, ತೀರ್ಥ ಮಹಾಪ್ರಸಾದ ವಿನಿಯೋಗ. ಜು.10ರಂದು ಕಾಕಡಾರತಿ, ಅಖಂಡ ಶ್ರೀರಾಮಜಪ, ಶ್ರೀಗಳಿಗೆ ಆರತಿ. ಜು.11ರಂದು ಗಣಪತಿ ನವಗ್ರಹ ಪುರಸ್ಸರ,ಶ್ರೀ ಸದ್ಗುರು ಹೋಮ, ರಾಮತಾರಕ ಹೋಮ, ಪೂರ್ಣಾಹುತಿ, ಜು.12ರಂದು ಸತ್ಯನಾರಾಯಣ ಪೂಜೆ, ಸಾಮೂಹಿಕ ಭಜನೆ, ಸದ್ಗುರುಗಳ ಉತ್ಸವ, ಗುರುಗಳಿಗೆ ಆರತಿ ನಡೆಯಲಿದ್ದು, ಗುರುಪೂರ್ಣಿಮಾ ಅಂಗವಾಗಿ ಗುರುಚರಿತ್ರೆ ಪಾರಾಯಣ ಹಾಗೂ ಶ್ರೀ ಸುಂದರಕಾಂಡ ಪಾರಾಯಣ ನಡೆಯಲಿದ್ದು, ಅಂದೇ ನಗರದ ರಾಜಬೀದಿಗಳಲ್ಲಿ ಸದ್ಗುರುಗಳ ಉತ್ಸವವು ವಿವಿಧ ಜಾನಪದ ಕಲಾತಂಡಗಳೊಂದಿಗೆ ನಡೆಯಲಿದೆ.
ರಾಜ್ಯ ಮಟ್ಟಕ್ಕೆ ಆಯ್ಕೆ
ತಿಪಟೂರು: ಜಿಲ್ಲಾ ಮಟ್ಟದ ಇನ್ಸೆಪೈರ್ ಅವಾರ್ಡ್ ವಿಜ್ಞಾನ ವಸ್ತುಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆಯಲ್ಲಿ ತಿಪಟೂರು ತಾಲೂಕಿನ ರಂಗಾಪುರ ಎಸ್.ಪಿ.ಎಸ್. ಕಿರಿಯ ಕಾಲೇಜಿನ 10ನೇ ತರಗತಿ ವಿದ್ಯಾರ್ಥಿನಿ ಜೆ.ಬಿ. ಕಾವ್ಯ ಭಾಗವಹಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈ ವಿದ್ಯಾರ್ಥಿನಿಗೆ ಸಂಸ್ಥೆಯ ಅಧ್ಯಕ್ಷರಾದ ಗುರುಪರದೇಶಿಕೇಂದ್ರ ಸ್ವಾಮೀಜಿ ಸೇರಿದಂತೆ ಆಡಳಿತಾಧಿಕಾರಿಗಳು, ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.