ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಜೈಮಿನಿ ಭಾರತ ಗಮಕೋತ್ಸವ ಹಬ್ಬ ನಾಳೆಯಿಂದ

Rashmi Kasaragodu
Updated On : 11 Jul 2014, 1:23 am

ತುಮಕೂರು: ಗಮಕ ಭಾರತೀ ಚಾರಿಟಬಲ್ ಟ್ರಸ್ಟ್ ಹಾಗೂ ಜಿಲ್ಲಾ ಗಮಕ ಕಲಾ ಪರಿಷತ್ತು ವತಿಯಿಂದ ನಗರದ ಸೋಮೇಶ್ವರಪುರಂನ ವಾಸವಿ ದೇವಸ್ಥಾನದ ಆವರಣದಲ್ಲಿ ಜೈಮಿನಿಭಾರತ  ಗಮಕೋತ್ಸವ ಏರ್ಪಡಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷೆ ತುಮಕೂರು ಸುನಂದಾ ತಿಳಿಸಿದ್ದಾರೆ.
ಪ್ರತಿದಿನ ಸಂಜೆ 6-30 ರಿಂದ ರಾತ್ರಿ 8-30 ರವರೆಗೆ ನಡೆಯುವ ಗಮಕೋತ್ಸವದಲ್ಲಿ ಜೈಮಿನಿಭಾರತದ ವಾಚನ-ವ್ಯಾಖ್ಯಾನವನ್ನು ನಾಡಿನ ಪ್ರಬುದ್ಧ ಗಮಕ ವಿದ್ವಾಂಸರು ನಡೆಸಿಕೊಡಲಿದ್ದಾರೆ. ಜು.12ರಂದು ಸಂಜೆ 5-30ಕ್ಕೆ, ಕರ್ನಾಟಕ ಕಲಾಶ್ರೀ ಗಮಕಿ ಗಂಗಮ್ಮ ಕೇಶವಮೂರ್ತಿ ಕಾರ್ಯಕ್ರಮ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಕಲಾಶ್ರೀ ಗಮಕಿ ಎಂ.ಆರ್. ಸತ್ಯನಾರಾಯಣ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಎನ್.ಎಸ್. ಜಯಕುಮಾರ್, ಎನ್.ಎಂ. ಚಿನಿವಾರ್ ಭಾಗವಹಿಸಲಿದ್ದಾರೆ. ಎಂ.ಜಿ. ಸಿದ್ಧರಾಮಯ್ಯ, ಲಕ್ಷ್ಮೀ ಜೈಪ್ರಕಾಶ್, ಗ.ಸೀ. ಶ್ರೀನಿವಾಸಮೂರ್ತಿ, ಚನ್ನರಾಯಪಟ್ಟಣದ ಇಂದಿರಾ ಶಾಸ್ತ್ರಿ, ಸಾಗರದ ಕೃಷ್ಣಯ್ಯ ಮುಂತಾದವರು ಉಪಸ್ಥಿತರಿರುವರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement