ತುಮಕೂರು: ತುಮಕೂರಿನ ಮಟ್ಟಿಗೆ ಗುರುವಾರ ಅಕ್ಷರಶಃ ಮುಂಗಾರು ಮಳೆಯ ಮ್ಯಾರಥಾನ್ ನಡೆಯಿತು. ಮಧ್ಯಾಹ್ನ 2 ಗಂಟೆಗೆ ತುಂತುರು ಮಳೆಯೊಂದಿಗೆ ಆರಂಭವಾದ ವರ್ಷಧಾರೆ ಕ್ರಮೇಣ ಮುಸುಲುಧಾರೆಯಾಗಿ ಸುರಿಯಿತು. ಸುಮಾರು ಒಂದೂವರೆ ಗಂಟೆಗಳಿಗೂ ಹೆಚ್ಚು ಕಾಲ ಧಾರಾಕಾರಾವಾಗಿ ಮಳೆ ಸುರಿಯಿತು. ಮಳೆಯಿಂದಾಗಿ ರಸ್ತೆಯ ಮೇಲೆ ಅರ್ಧ ಅಡಿ ನೀರು ಹರಿಯುತ್ತಿತ್ತು. ದಟ್ಟವಾಗಿ ಮೋಡ ಹೆಪ್ಪುಗಟ್ಟಿದ್ದರಿಂದ ಮಧ್ಯಾಹ್ನವೇ ಕತ್ತಲು ಆವರಿಸಿತು. ಭರ್ತಿ ಒಂದೂವರೆ ಗಂಟೆಗಳ ಕಾಲ ಮಳೆ ಸುರಿದಿದ್ದರಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಒಂದೂವರೆ ಗಂಟೆ ಧಾರಾಕಾರವಾಗಿ ಸುರಿದು ನಿಂತಿತು. ಸಂಜೆ ಪುನಃ ತುಂತುರು ಮಳೆಯೊಂದಿಗೆ ಮಳೆ ಮ್ಯಾರಥಾನ್ ಮುಂದುವರೆಯಿತು. ಬಹುತೇಕ ಎಲ್ಲ ಬಡಾವಣೆಗಳಲ್ಲಿ ಸಂಚಾರ ವಿರಳವಾಗಿತ್ತು. ಇನ್ನು ಬಿ.ಎಚ್. ರಸ್ತೆ, ಸೋಮೇಶ್ವರಪುರಂ ಮುಖ್ಯ ರಸ್ತೆಯಲ್ಲಿ ಕೊಂಚ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು.