ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸ್ಲಂ ಘೋಷಣಾ ಪ್ರಕ್ರಿಯೆ ಡಿಸಿ ಮಟ್ಟದಲ್ಲೇ ಆಗಲಿ

Rashmi Kasaragodu
Updated On : 11 Jul 2014, 1:22 am

ತುಮಕೂರು: ನಗರಗಳಲ್ಲಿ ಸ್ಲಂ ಘೋಷಣೆ ಪ್ರಕ್ರಿಯೆ ಜಿಲ್ಲಾಧಿಕಾರಿಗಳ ಮಟ್ಟದಲ್ಲೇ ಆಗಲಿ ಎಂಬ ಹಕ್ಕೊತ್ತಾಯವನ್ನು ಸ್ಲಂ ನಿವಾಸಿಗಳು ಮಂಡಿಸಿದರು.
ನಗರಗಳಲ್ಲಿ ಸ್ಲಂ ನಿವಾಸಿಗಳು ವಾಸಿಸಲು ಯೋಗ್ಯವಲ್ಲದ ಸ್ಥಳಗಳಲ್ಲಿ ಗುಡಿಸಲು, ಶೆಡ್ಡು, ಮನೆಗಳನ್ನು ಕಟ್ಟಿಕೊಂಡು ವಾಸಿಸುತ್ತಿರುವ ಪ್ರದೇಶಗಳನ್ನು ಸರ್ಕಾರ ಕೊಳೆಗೇರಿ ಅಭಿವೃದ್ಧಿ ಮಂಡಳಿ ಕಾಯ್ದೆ 3ರ ಅನ್ವಯ ಘೋಷಿಸಿ ಅವರಿಗೆ ಮೂಲಸೌಕರ್ಯ ಘೋಷಣೆಯನ್ನು ಜಿಲ್ಲಾಧಿಕಾರಿಗಳೇ ಮಾಡಲಿ ಎಂದು ಮನವಿ ಸಲ್ಲಿಸಲಾಯಿತು.
ತುಮಕೂರಿನಲ್ಲಿ ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಅವರು ತಮ್ಮ ವ್ಯಾಪ್ತಿಯಲ್ಲಿ ಬರುವ ಕೊಳಚೆ ಪ್ರದೇಶಗಳನ್ನು ತಡ ಮಾಡದೇ ಘೋಷಿಸಲು ಮುಂದಾಗುತ್ತಿರುವುದು ಸಂತೋಷದ ವಿಚಾರ. ಹಾಗೆಯೇ ಘೋಷಣೆಯನ್ನು ಅವರೇ ಮಾಡಲಿ ಎಂದಿದ್ದಾರೆ. ಇದೇ ಪ್ರಕ್ರಿಯೆಯನ್ನು ಮುಂದುವರಿಸುವಂತೆ ಆಗ್ರಹಿಸಿ ತುಮಕೂರು ಜಿಲ್ಲಾ ಕೊಳೆಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ನಿಯೋಗದೊಂದಿಗೆ ಜಿಲ್ಲಾಧಿಕಾರಿಗಳ ಮುಖಾಂತರ ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಲಾಯಿತು.
ಸರ್ಕಾರದ ಅಧಿಸೂಚನೆ ಪ್ರಕಾರ ಕೊಳಚೆ ಪ್ರದೇಶದ ಘೋಷಣೆಗೆ ಪ್ರಸ್ತಾವನೆಯನ್ನು ಸೂಕ್ತದಾಖಲೆಯೊಂದಿಗೆ ಆಯುಕ್ತರು ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಪ್ರಸ್ತಾವನೆ ಪರಿಶೀಲಿಸಿದ ನಂತರ ಕರ್ನಾಟಕ ಕೊಳಚೆ ಪ್ರದೇಶಗಳು ಅಧಿನಿಯಮ 1973 ಸೆಕ್ಷನ್ 3 ಮತ್ತು 11ರ ಅನ್ವಯ ಆಯಾ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ಕೊಳಚೆ ಪ್ರದೇಶಗಳನ್ನು ಕೊಳಚೆ ಪ್ರದೇಶವೆಂದು ಘೋಷಿಸುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ಆದರೆ ಜಿಲ್ಲಾ ಮಟ್ಟದಲ್ಲಿ ಘೋಷಣೆ ಪ್ರಕ್ರಿಯೆ ಚುರುಕಾದ ಕಾರಣ ಮೇಲ್ಕಂಡ ಸುತ್ತೋಲೆಯಲ್ಲಿ 9 ದಾಖಲೆಯೊಂದಿಗೆ ಆಯುಕ್ತರ ಅನುಮೋದನೆ ಪಡೆದು ಜಿಲ್ಲಾಧಿಕಾರಿಗಳಿಗೆ ಕೊಳೆಗೇರಿಗಳ ಅಧಿಸೂಚನೆಗೆ ಸಲ್ಲಿಸುವುದು ಮೂಲ ಕಾಯಿದೆ ಆಶಯಕ್ಕೆ ವಿರುದ್ಧವಾಗಿದೆ.
ಆದ್ದರಿಂದ ಈ ಸುತ್ತೋಲೆಯನ್ನು ಸರ್ಕಾರ ಕೊಡಲೇ ಹಿಂಪಡೆದು ಕೊಳಚೆ ಪ್ರದೇಶಗಳ ಘೋಷಣೆ ಪ್ರಕ್ರಿಯೆಯನ್ನು ಸರಳಗೊಳಿಸಿ ಸ್ಲಂ ಕಾಯಿದೆಯ 2002ರ ತಿದ್ದುಪಡ್ಡಿ ಮತ್ತು ಕೊಳಚೆ ಪ್ರದೇಶಗಳ ತಿದ್ದುಪಡಿ ನಿಯಮ 2004ರಂತೆ ಕೊಳಚೆ ಪ್ರದೇಶಗಳ ಅಧಿಸೂಚನೆ ಹೊರಡಿಸಲು ಎಲ್ಲಾ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಬೇಕೇಂದು ಸ್ಲಂ ಜನಾಂದೋಲನ ಕರ್ನಾಟಕ ಮತ್ತು ಸದಸ್ಯ ಸಂಘಟನೆಗಳು ಒತ್ತಾಯಿಸುತ್ತಿವೆ.
ಅಘೋಷಿತ ಕೊಳಚೆ ಪ್ರದೇಶಗಳನ್ನು ಘೋಷಣೆ ಮಾಡಲು ನಿರ್ದಿಷ್ಟವಾದ ಮಾನದಂಡ ಮತ್ತು 90 ದಿನಗಳ ಸಮಯಾವಕಾಶವನ್ನು ಆಯಾ ವಿಭಾಗದ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಪ್ರಕ್ರಿಯೆ ಪೂರ್ಣಗೊಳಿಸುವ ಆಧಿಕಾರ ನೀಡಬೇಕು.
ಜಿಲ್ಲಾ ಮಟ್ಟದಲ್ಲಿ ಘೋಷಣೆಗಿರುವ ಪ್ರಕ್ರಿಯೆಯನ್ನು ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಮತ್ತು ಮಂಡಳಿ ಕಂದಾಯ ವಿಭಾಗಕ್ಕೆ ಜವಾಬ್ದಾರಿ ನೀಡಿ ಜಿಲ್ಲಾಧಿಕಾರಿಗೆ ಸಲ್ಲಿಸಲು ಆದೇಶಿಸಬೇಕು. ಇತ್ತೀಚೆಗೆ ಕೇಂದ್ರ ಮತ್ತು ರಾಜ್ಯಗಳಲ್ಲಿ ಬದಲಾಗಿರುವ ಕಾಯಿದೆ ಮತ್ತು ನಿಯಾಮವಳಿಗೆ ಅನುಗುಣವಾಗಿ ಸ್ಲಂ ಘೋಷಣೆ ಪ್ರಕ್ರಿಯೆಯನ್ನು ಪರಿಷ್ಕರಣೆ ಮಾಡಬೇಕು ಹಾಗೂ ಈ ಬಗ್ಗೆ ಜಂಟಿ ಸಭೆ ನಡೆಸಲು ಆಗ್ರಹಿಸಲಾಗಿದೆ.
ಕೊಳೆಗೇರಿ ಸಮಿತಿ ಪ್ರಧಾನ ಕಾರ್ಯದರ್ಶಿ ಸೈಯದ್ ಅಲ್ತಾಫ್, ಜಂಟಿ ಕಾರ್ಯದರ್ಶಿ ಶೆಟ್ಟಾಳಯ್ಯ, ರಾಮಯ್ಯ, ಅರುಣ್, ಕೋಮಲ, ಗಾಯತ್ರಿ, ಮಾರಿಯಮ್ಮ ನಗರದ ಅಟ್ಟೆಕಾರ್, ಮುರುಗ, ಕಾತಿ, ಕೃಷ್ಣ, ಗೋವಿಂದಮ್ಮ ಮತ್ತಿತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement