ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಪ್ರಾಮಾಣಿಕತೆಯಿಂದ ಆಡಳಿತ ಸುಗಮ

Rashmi Kasaragodu
Updated On : 12 Jul 2014, 12:54 pm

ಕೊರಟಗೆರೆ: ಸರ್ಕಾರಿ ಸೇವೆಯಲ್ಲಿ ಪ್ರಾಮಾಣಿಕತೆ, ದಕ್ಷತೆಯೊಂದಿಗೆ ಸರ್ಕಾರಿ ವಿಷಯಗಳಲ್ಲಿ ಗೌಪ್ಯತೆ ಕಾಪಾಡಿದರೆ ಆಡಳಿತ ಸುಗಮವಾಗಿ ನಡೆಯುತ್ತದೆ ಎಂದು ತಹಸೀಲ್ದಾರ್ ರಾಮಚಂದ್ರಪ್ಪ ಹೇಳಿದರು. ತಾಲೂಕು ಕಚೇರಿಯಲ್ಲಿ ಆಯೋಜಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಸರ್ಕಾರಿ ಸೇವೆಯಲ್ಲಿ ಅಧಿಕಾರಿಯಾಗಿ ಕೆಲಸ ನಿರ್ವಹಿಸಬೇಕಾದರೆ ಸಾರ್ವಜನಿಕರ ಹಾಗೂ ಸಹುದ್ಯೋಗಿಗಳ ಸಹಕಾರ ಅತ್ಯಗತ್ಯ. ಹಿರಿಯ ಅಧಿಕಾರಿಗಳ ಮಾರ್ಗದರ್ಶನವೂ ಅವಶ್ಯಕವಾಗಿರುತ್ತದೆ ಎಂದು ಅವರು ತಿಳಿಸಿದರು. ಕೊರಟಗೆರೆ ತಾಲೂಕು ಪ್ರಭಾರ ತಹಸೀಲ್ದಾರ್ ಆಗಿರುವ ಮಧುಗಿರಿಯ ರಮೇಶ್ ಮಾತನಾಡಿ, ವರ್ಗಾವಣೆ ಎಂಬುದು ಎಲ್ಲ ಸರ್ಕಾರಿ ನೌಕರರಿಗೂ ಸಮಾನ್ಯ. ಇರುವ ಸಮಯದಲ್ಲಿ ಜನತೆಗೆ ಹಾಗೂ ಇಲಾಖೆಗೆ ಉತ್ತಮ ಸೇವೆಸಲ್ಲಿಸಿದಲ್ಲಿ ಒಳ್ಳೆಯ ಹೆಸರು ತಾನಾಗಿಯೇ ಬರುತ್ತದೆ ಎಂದು ತಿಳಿಸಿದರು. ಸಭೆಯಲ್ಲಿ ವಿ.ಕೆ.ವೀರಕ್ಯಾತರಾಯ, ಎಲ್.ಕಾಮಯ್ಯ, ಮುರಳಿ, ನರಸಿಂಹಮೂರ್ತಿ, ರಾಜು, ಗುರುಪ್ರಸಾದ್, ಚನ್ನವೀರಯ್ಯ, ಬೈಲಾ ವೆಂಕಟೇಶ್, ಬಂಡೆಗೌಡ, ಶ್ರೀನಿವಾಸಮೂರ್ತಿ, ರಮೇಶ್, ಪ್ರಕಾಶ್ ಇದ್ದರು.
ಹುಳಿಯಾರಿನಲ್ಲಿ ಸಂಭ್ರಮದಗುರುಪೌರ್ಣಿಮೆ ಇಂದು
ಹುಳಿಯಾರು: ಹೊಸದುರ್ಗ ತಾಲೂಕಿನ ಶ್ರೀಕ್ಷೇತ್ರ ಬೆಲುಗೂರಿನ ವೀರಪ್ರತಾಪ ಆಂಜನೇಯಸ್ವಾಮಿ ಸನ್ನಿಧಾನದಲ್ಲಿ ಗುರುಪೌರ್ಣಿಮೆ 12ರಂದು ನಡೆಯಲಿದೆ. ಬಿಂದುಮಾಧವ ಶರ್ಮ ಸ್ವಾಮೀಜಿ ನೇತೃತ್ವದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿವೆ ಎಂದು ದೇವಾಲಯ ಸಮಿತಿ ತಿಳಿಸಿದೆ.
ಕುಣಿಗಲ್ನಲ್ಲಿ...
ಕುಣಿಗಲ್: ತಾಲೂಕು ಸನಾತನ ಸಂಸ್ಥೆ ಆಶ್ರಯದಲ್ಲಿ ಗುರುಪೌರ್ಣಿಮೆ ಮಹೋತ್ಸವ 12ರಂದು ಗಂಗಾಧರೇಶ್ವರ ಪ್ಯಾಲೆಸ್ನಲ್ಲಿ ಹಮ್ಮಿಕೊಳ್ಳಲಾಗಿದೆ. ಪ್ರಿಯಾಂಕ ಸ್ವಾಮಿ ಮತ್ತು ಅಮೃತೇಶ್ ಗುರುಪೌರ್ಣಿಮೆ ಮಹಿಮೆ ಕುರಿತು ಉಪನ್ಯಾಸ ನೀಡಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement