ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಒಬ್ಬ ವಿದ್ಯಾರ್ಥಿಗೆ 14 ಜನ ನಿರ್ವಾಹಕರು!

Rashmi Kasaragodu
Updated On : 13 Jul 2014, 1:17 am

ಕೊರಟಗೆರೆ: ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯಲ್ಲಿ ತಾಲೂಕಿನಲ್ಲಿ ಪರೀಕ್ಷೆ ಬೆರೆದ ಒಬ್ಬನೆ ವಿದ್ಯಾರ್ಥಿಯಾದರೂ 14 ಅಧಿಕಾರಿಗಳು ಪರೀಕ್ಷಾ ಕಾರ್ಯನಿರ್ವಹಿಸಿದರು!
ಕೊರಟಗೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಪರೀಕ್ಷಾ ಕೇಂದ್ರದಲ್ಲಿ ಒಬ್ಬನೇ ವಿದ್ಯಾರ್ಥಿ ಪರೀಕ್ಷೆ ಬರೆದರು. ಇದರ ನಿರ್ವಹಣೆಗೆ ಒಬ್ಬ ಮುಖ್ಯ ಅಧೀಕ್ಷಕ, ಒಬ್ಬ ಉಪಾಧ್ಯಕ್ಷಕ, ಒಬ್ಬ ಕೊಠಡಿ ಮೇಲ್ವಿಚಾರಕ, 4 ಮಂದಿ ಪ್ರಶ್ನೆ ಪತ್ರಿಕಾ ಸರಬರಾಜು ಜಾಗೃತದಳ, 2 ಸ್ಥಾನಿಕ ಜಾಗೃತಿದಳ, ಒಬ್ಬ ಪೊಲೀಸ್ ಪೇದೆ, ಇಬ್ಬರು ಡಿ ಗ್ರೂಪ್ ನೌಕರರಿದ್ದರು.
ಈ ಬಗ್ಗೆ ಕಾಲೇಜಿನ ಪ್ರಾಚಾರ್ಯರಾದ ಮೀರ್ ಅಲೀಂ ಹುಸೇನ್ ಪ್ರತಿಕ್ರಿಯಿಸಿ, ತಾಲೂಕಿನಲ್ಲಿ 10 ಪದವಿ ಪೂರ್ವ ಕಾಲೇಜುಗಳಿದ್ದೂ, ಪರೀಕ್ಷಾ ಕೇಂದ್ರ ಮಾತ್ರ ಒಂದೇ ಇದ್ದು, ಪತ್ರಿನಿತ್ಯ ವಿವಿದ ವಿಷಯಗಳಲ್ಲಿ ಎರಡು ರಿಂದ ನಾಲ್ಕು ಕೊಠಡಿಗಳಲ್ಲಿ ಸುಮಾರು 100 ರಿಂದ 150 ಮಂದಿ ಪರೀಕ್ಷೆ ಬರೆಯುತ್ತಿದ್ದಾರೆ. ಶನಿವಾರ ಹಿಂದಿ ಬಾಷೆ ಪರೀಕ್ಷೆ ಇತ್ತು ಮತ್ತು ಇದು ಕೊನೆಯ ಪರೀಕ್ಷೆ. ಈ ವಿಷಯದಲ್ಲಿ ತಾಲೂಕಿನಿಂದ ಒಬ್ಬ ವಿದ್ಯಾರ್ಥಿ ಮಾತ್ರ ಪರೀಕ್ಷೆ ಪಡೆದಿದ್ದ. ಹಾಗಾಗಿ, ಒಬ್ಬನೇ ವಿದ್ಯಾರ್ಥಿ ಇರಲಿ ಸಾವಿರ ವಿದ್ಯಾರ್ಥಿಗಳಿರಲಿ ವ್ಯವಸ್ಥೆ ಒಂದೇ ರೀತಿ ಕಾರ್ಯ ನಿರ್ವಹಿಸುತ್ತದೆ ಎಂದು ಸ್ಪಷ್ಟಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement