ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕೈಗಾರಿಕಾ ಕಾರಿಡಾರ್ನಿಂದ ಅಭಿವೃದ್ಧಿ

Rashmi Kasaragodu
Updated On : 13 Jul 2014, 1:17 am

ತುಮಕೂರು: ಚನೈ - ಬೆಂಗಳೂರು -ಮುಂಬಯಿ ಕೈಗಾರಿಕಾ ಕಾರಿಡಾರ್ ಯೋಜನೆ ಮತ್ತು ಕೈಗಾರಿಕಾ ಸ್ಮಾರ್ಟ್ ಸಿಟಿ ತುಮಕೂರಿನಲ್ಲಿ ಸ್ಥಾಪನೆಯಾಗುತ್ತಿರುವುದರಿಂದ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಮುನ್ನುಡಿ ಬರೆಯಲಿದೆ ಎಂಬ ವಿಶ್ವಾಸವನ್ನು ತುಮಕೂರು ಗ್ರಾಮಾಂತರ ಶಾಸಕ ಬಿ. ಸುರೇಶ್ಗೌಡ ವ್ಯಕ್ತಪಡಿಸಿದರು.
ತುಮಕೂರು ಸಮೀಪದ ಗೂಳುರು ಹೋಬಳಿ ಕರಡಗೆರೆ ಕಾವಲ್ ಗ್ರಾಮದಲ್ಲಿ ನಡೆದ ಫವರ್ ಟ್ರಿಲ್ಲರ್ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ತುಮಕೂರಿಗೆ ಇಂದಿನ ಕೇಂದ್ರದ ಬಿಜೆಪಿ ಸರ್ಕಾರ ಅಪಾರ ಕೊಡುಗೆ ನೀಡಿದೆ. ಕಾರಿಡಾರ್ ಯೋಜನೆ ಮತ್ತು ಕೈಗಾರಿಕಾ ಸ್ಮಾರ್ಟ್ ಸಿಟಿ ತುಮಕೂರಿನಲ್ಲಿ ಸ್ಥಾಪಿಸಲು ಕೆಂದ್ರ ಬಜೆಟ್ನಲ್ಲಿ 100 ಕೋಟಿ ಅನುದಾನ ಘೋಷಣೆ ಮಾಡಿರುವುದು ನಮ್ಮ ಜಿಲ್ಲೆಯ ಸೌಭಾಗ್ಯ ಎಂದು ಶಾಸಕ ಬಿ. ಸುರೇಶ್ ಗೌಡ ಬಣ್ಣಿಸಿದರು.
ಇದರಿಂದ ದೇಶದ ಬೃಹತ್ ಕೈಗಾರಿಕೆಗಳು ಇಲ್ಲಿ ಸ್ಥಾಪಿಸುವುದರಿಂದ ಈ ಭಾಗದ ರೈತರಿರಬಹುದು ವಿದ್ಯಾವಂತ ನಿರುದ್ಯೋಗಿಗಳು ಇರಬಹುದು ಮತ್ತು ಎಲ್ಲ ವರ್ಗದ ಎಲ್ಲ ಸಮುದಾಯಗಳೂ ಕೂಡಾ ಸಾಮಾಜಿಕವಾಗಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಬಹುದಾಗಿದೆ ಎಂದರು.
ವಿಶೇಷವಾಗಿ ರೈತರು ಬೆಳೆದಿರುವ ಬೆಳೆಗಳ ಕೃಷಿ ಉತ್ಪನ್ನ ಆಹಾರ ಪದಾರ್ಥಗಳ ಸಂಸ್ಕರಣಾ ಘಟಕವನ್ನು ಸ್ಥಾಪನೆಯಾಗುತ್ತಿದೆ ಎಂದು ಸುರೇಶ್ ಗೌಡರು ವಿವರಿಸಿದರು.
ಸುಮಾರು 18 ಜಿಲ್ಲೆಗಳಿಂದ ರಾಜಧಾನಿ ಬೆಂಗಳೂರಿಗೆ ಬರುವ ನಾಗರಿಕರಿಗೆ ತುಮಕೂರು ಹೆಬ್ಬಾಗಿಲಾಗಿದೆ. ಈ ಹಿನ್ನೆಲೆಯಲ್ಲಿ ತುಮಕೂರು ಸ್ಮಾರ್ಟ್ ಸಿಟಿಯಾಗುತ್ತಿರುವುದರಿಮದ ತುಮಕೂರು ನಗರ ಮತ್ತು ಜಿಲ್ಲೆ ಸಮಗ್ರ ಅಭಿವೃದ್ಧಿಯೆಡೆಗೆ ಸಾಗಲಿದೆ ಇದು ನಮ್ಮ ಪೂರ್ವ ಜನ್ಮದ ಪುಣ್ಯದ ಫಲವೇ ಇರಬಹುದೆಂದು ಸಂತಸ ವ್ಯಕ್ತಪಡಿಸಿದರು.
ರೈತರು ಸ್ವಾವಲಂಬಿ ಕೃಷಿಕರಾಗಿ: ರೈತರು ಆಧುನಿಕ ಕೃಷಿ ಪರಿಕರಗಳಾದ ಟ್ರ್ಯಾಕ್ಟರ್, ಫವರ್ ಟ್ರಿಲ್ಲರ್ಗಳನ್ನು ಕೃಷಿ ಚಟುವಟಿಕೆಯಲ್ಲಿ ಬಳಕೆ ಮಾಡಿಕೊಂಡು  ಸ್ವಾವಲಂಬಿ ಕೃಷಿಕರಾಗುವಂತೆ ಸಲಹೆ ನೀಡಿದರು.
ರೈತ ಈ ದೇಶದ ಬೆನ್ನುಲುಬು ಎಂದು ಅನೇಕ ಸಂಶೋದನೆಗಳಿಂದ ತಿಳಿದಿರುವ ವಿಷಯ. ಇದನ್ನು ಅನೇಕ ರಾಜಕಾರಣಿಗಳು, ಕೃಷಿ ತಜ್ಞರು ತಮ್ಮ ಭಾಷಣಗಳಲ್ಲಿ ಉಲ್ಲೇಖ ಮಾಡುತ್ತಾರೆ. ಕೃಷಿಕನ ಬದುಕು ಸರಿದೂಗಿಸುವ ನಿಟ್ಟಿನಲ್ಲಿ ಸರ್ಕಾರಗಳು ಹೆಚ್ಚಿನ ಆದ್ಯತೆ ನೀಡಿ ಕಾರ್ಯನಿರ್ವಹಿಸಬೇಕಾಗಿದೆ ಎಂದು ಒತ್ತಾಯಿಸಿದರು.
ಕೃಷಿಕನ ಬದುಕಿನ ಕಥೆ ಕಣ್ಣೀರ ಕಥೆಯಾಗಿದೆಯೇ ಹೊರತು ಕೃಷಿಯಿಂದ ಅಭಿವೃದ್ಧಿಯಾಗಿ ಸುಸ್ತಿರ ಜೀವನ ಸಾಗಿಸುತ್ತಿದ್ದೇನೆ ಎಂದು ಎದೆ ಮುಟ್ಟಿ ಹೇಳುವಷ್ಟು ಧೈರ್ಯ ನಮ್ಮ ಕೃಷಿಕರಲ್ಲಿ ಇಲ್ಲದಾಗಿದೆ. ಕಾರಣ ಕಷ್ಟ ಪಟ್ಟು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗುವುದಿಲ್ಲ ಉತ್ತಮ ಬೆಲೆ ಸಿಕ್ಕಾಗ ಬೆಳೆ ಬೆಳೆದಿರುವುದಿಲ್ಲ ಇದು ವಿಪರ್ಯಾಸ ಎಂದು ವಿಷಾದಿಸಿದರು. ಗೂಳೂರು ಶಿವಕುಮಾರ್, ಎಂ.ಬಿ. ಕುಮಾರ್, ಕಣಕುಪ್ಪೆ ಶಿವಕುಮಾರ್, ಹಾಲುನೂರು ಬಾಬು, ಚನ್ನಿಗಪ್ಪನಪಾಳ್ಯದ ಪಟೇಲರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement