ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಟೋನ್ಡ್ ಹಾಲು ಶೇಖರಣಾ ಘಟಕಕ್ಕೆ ಶೀಘ್ರ ಚಾಲನೆ

Rashmi Kasaragodu
Updated On : 13 Jul 2014, 1:14 am

ಗುಬ್ಬಿ: ಮಲ್ಲಸಂದ್ರ ಹಾಲಿನ ಡೈರಿಯಲ್ಲಿ ನೂತನವಾಗಿ ಪಾಶ್ಚೀಕರಿಸಿದ ಟೋನ್ಡ್ ಹಾಲು ಶೇಖರಣಾ ಘಟಕವನ್ನು ಸ್ಥಾಪಿಸಲಾಗುತ್ತಿದ್ದು, ಈ ನಿಟ್ಟಿನಲ್ಲಿ 1 ಲಕ್ಷ ಲೀ. ಹಾಲು ನಿತ್ಯ ಸರಬರಾಜು ಮಾಡುವ ಈ ಘಟಕಕ್ಕೆ ಶೀಘ್ರವೇ ಗುದ್ದಲಿ ಪೂಜೆ ಮಾಡಲಾಗುವುದು ಎಂದು ಕರ್ನಾಟಕ ಹಾಲು ಮಹಾ ಮಂಡಳಿಯ ನೂತನ ನಿರ್ದೇಶಕ ಗೋಪಾಲಪುರ ಚಂದ್ರಶೇಖರ್ ತಿಳಿಸಿದರು. ಪಟ್ಟಣದ ನಂದಿನಿ ಬ್ಯಾಂಕ್ನಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಘಟಕ ಸ್ಥಾಪನೆಗೆ ಸಚಿವ ಜಯಚಂದ್ರ, ಶಾಸಕ ಕೆ.ಎನ್.ರಾಜಣ್ಣ ಅವರ ಶ್ರಮವಿದೆ. ಕೆಎಂಎಫ್ ರಾಜ್ಯ ನಿರ್ದೇಶಕರಾಗಿ ಆಯ್ಕೆ ಮಾಡಲು ಸಹಕರಿಸಿದ ಜಿಲ್ಲೆಯ ಎಲ್ಲಾ ತಾಲೂಕುಗಳ ನಿರ್ದೇಶಕರಿಗೆ ಕೃತಜ್ಞತೆ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement