ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಧಾರ್ಮಿಕ ಆಚರಣೆ ಕಣ್ಮರೆ

Rashmi Kasaragodu
Updated On : 13 Jul 2014, 1:15 am

ಹುಳಿಯಾರು: ಆಧುನಿಕತೆಯಿಂದಾಗಿ ಯುವ ಪೀಳಿಗೆ ನಮ್ಮ ಧಾರ್ಮಿಕ ಆಚರಣೆಗಳನ್ನು ಮರೆಯುತ್ತಿರುವುದು ವಿಷಾದನೀಯ ಎಂದು ಸುನ್ನೀ ಧಾವತೆ ಇಸ್ಲಾಮಿ ಸಂಘಟನೆ ಮುಖ್ಯಸ್ಥ ಅಲ್ಹಜ್ಹಜರತ್ ಬಾಯ್ ತಿಳಿಸಿದರು. ಹುಳಿಯಾರಿನ ಜಾಮೀಯಾ ಶಾದಿ ಮಹಲ್ನಲ್ಲಿ  ರಂಜಾನ್ ಹಬ್ಬದ ಮಹತ್ವ ಕುರಿತು ಮುಸ್ಲಿಂ ಯುವಕರು ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ರಂಜಾನ್ ಹಬ್ಬದ ಮಹತ್ವ, ಅದನ್ನು ಆಚರಿಸುವ ರೀತಿನೀತಿಗಳ ಬಗ್ಗೆ ತಿಳಿಸಿದರು. ಮುಸ್ಲಿಂ ಯುವಕ ಸಂಘದ ಇಮ್ರಾಜ್ ಮಾತನಾಡಿ, ಧಾರ್ಮಿಕ ಆಚರಣೆಗಳನ್ನು ಮುಂದಿನ ಪೀಳಿಗೆಗೆ ತಿಳಿಸಬೇಕು ಎಂದರು. ಜಾಮೀಯಾ ಮಸೀದಿ ಮುತವಲ್ಲಿ ಜಬಿವುಲ್ಲಾ, ಉರ್ದು ಶಾಲೆಯ ಶಿಕ್ಷಕ ಮುಜ್ಮಿಲ್, ನಾಸೀರ್ ಬೇಗ್, ಸೈಯದ್ ನೂರ್, ಷಭಾಸ್ ಖಾನ್ ಇದ್ದರು.
ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಇಂದು
ತಿಪಟೂರು: ದಲಿತ ಸಾಹಿತ್ಯ ಪರಿಷತ್ ತಾಲೂಕು ಶಾಖೆ ವತಿಯಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಜನಪ್ರತಿನಿಧಿಗಳಿಗೆ ಅಭಿನಂದನೆ ಮತ್ತು ಗಣ್ಯರಿಗೆ ಸನ್ಮಾನ ಸಮಾರಂಭ ಹಾಗೂ ಬಾಬಾಸಾಹೇಬ ಅಂಬೇಡ್ಕರ್ ನಾಟಕ ಪ್ರದರ್ಶನವನ್ನು ಪಟ್ಟಣದ ಬಯಲು ರಂಗಮಂದಿರದಲ್ಲಿ ಭಾನುವಾರ ಸಂಜೆ 4.30ಕ್ಕೆ ಏರ್ಪಡಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement